ದಾವಣಗೆರೆ: ಭದ್ರಾ ಜಲಾಶಯದ (bhadra dam) ಮಲೆನಾಡು ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ಭದ್ರಾ ನದಿ ಹರಿವು ಭರ್ಜರಿ ಹೆಚ್ಚಾಗಿದ್ದು, ಜಲಾಶಯ ಒಳಹರಿವು ಒಂದೇ ದಿನ ಬರೋಬ್ಬರಿ 19 ಸಾವಿರ ಗಡಿದಾಟಿದೆ. ಇಂದು (ಜೂ.19) ಬೆಳಗ್ಗೆ ಹೊತ್ತಿಗೆ ಒಳ ಹರಿವು 19,027 ಕ್ಯೂಸೆಕ್ ನಷ್ಟಿದೆ. ಈ ಮೂಲಕ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೆಚ್ಚಳವಾಗಿದೆ.
ಜೂ.12ರಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು, ಜಲಾಶಯ ಒಳ ಹರಿವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭದ್ರಾ ಜಲಾಶಯಶದ ಇಂದಿನ ( ಜೂ.19) ನೀರಿನಮಟ್ಟ 148.3 ಅಡಿ ಇದ್ದು, ಒಳ ಹರಿವು 19,027 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 119.0 ಅಡಿ ನೀರು ಇತ್ತು. ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರಿ ಬೇಗನೇ ಭದ್ರಾ ಜಲಾಶಯ ತುಂಬುವ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :19-06-2025
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 32,917 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 148.3 ಅಡಿ
- ಒಳ ಹರಿವು : 19,027 ಕ್ಯೂಸೆಕ್
- ಹೊರ ಹರಿವು : 1,273 ಕ್ಯೂಸೆಕ್
- ಎಡ ದಂಡೆ : 00 ಕ್ಯೂಸೆಕ್
- ಬಲ ದಂಡೆ : 00 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 119.0 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 447 ಕ್ಯೂಸೆಕ್



