Connect with us

Dvgsuddi Kannada | online news portal | Kannada news online

ದಾವಣಗೆರೆ: ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆಡಳಿತ ಮಂಡಳಿಯಿಂದ ಹಣ ದುರುಪಯೋಗ ಆರೋಪ; ದಾಖಲೆ ಪರಿಶೀಲಿಸಿದ ಎಸಿ

dvg venkateshwar temple

ದಾವಣಗೆರೆ

ದಾವಣಗೆರೆ: ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಆಡಳಿತ ಮಂಡಳಿಯಿಂದ ಹಣ ದುರುಪಯೋಗ ಆರೋಪ; ದಾಖಲೆ ಪರಿಶೀಲಿಸಿದ ಎಸಿ

ದಾವಣಗೆರೆ : ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಹಣವ ದುರುಪಯೋಗ ಆರೋಪ ಬಂದ ಹಿನ್ನೆಲೆ ಉಪ ವಿಭಾಗಾಧಿಕಾರಿ ( ಎಸಿ) ಸಂತೋಷ್ ನೇತೃತ್ವದಲ್ಲಿ ಅಧಿಕಾರಿಗಳು ಖಲೆಗಳನ್ನು ಪರಿಶೀಲಿಸಿದರು.

ಈ ಬಗ್ಗೆ ಸಾರ್ವಜನಿಕರ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದರು. ಇದರಿಂದ ದಾಖಲೆ ಪರಿಶೀಲನೆ ನಡೆದಿದೆ. ದೇವಸ್ಥಾನದ ಜಾಗ ಎಷ್ಟಿದೆ? ಯಾರ ಹೆಸರಿನಲ್ಲಿದೆ? ವ್ಯವಸ್ಥಾಪನಾ ಸಮಿತಿ ಇದೆಯಾ? ಎಂಬ ಕುರಿತು ದಾಖಲೆ ಪರಿಶೀಲನೆ ನಡೆದುದೆ ಎಂದು ಗೊತ್ತಾಗಿದೆ.

ಸರ್ಕಾರ ವಶಕ್ಕೆ ಮನವಿ

ಸಾರ್ವಜನಿಕ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಹಲವಾರು ಭಕ್ತರು ಶ್ರೀ ವೆಂಕಟೇಶ್ವರ ದೇವಾಲಯ ಆಡಳಿತ ಮಂಡಳಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ದೇವಸ್ಥಾನವನ್ನು ಸರ್ಕಾರಿ ವಶಕ್ಕೆ ಪಡೆಯಲು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಎಸಿ ಸಂತೋಷ್ ಹಾಗೂ ಪಾಲಿಕೆ ಅಧಿಕಾರಿಗಳು ಇಂದು ದೇವಸ್ಥಾನಕ್ಕೆ ಆಗಮಿಸಿ, ದಾಖಲೆ ಪರಿಶೀಲಿಸಿದರು. ಈ ದೇವಾಲಯವು ಸರ್ಕಾರಿ ನಿವೇಶನದಲ್ಲಿರುವುದರಿಂದ, ಅದನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು. ಇಲ್ಲವೇ ದೇವಾಲಯದ ಅಭಿವೃದ್ಧಿಗೆ ಪಾರದರ್ಶಕ ಆಡಳಿತ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದಾರೆ.

ಹಾಸ್ಟೆಲ್ ನಿರ್ಮಾಣಕ್ಕಾಗಿ ಜಾಗ ಮಂಜೂರು

1985ರಲ್ಲಿ ಶಂಕುಸ್ಥಾಪನೆಯಾಗಿ 1991ರಲ್ಲಿ ಉದ್ಘಾಟನೆಗೊಂಡ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯವನ್ನು ನಾಗರಿಕ ಸೇವಾ ನಿವೇಶನದಲ್ಲಿ ನಿರ್ಮಿಸಲಾಗಿದೆ. ಹಾಸ್ಟೆಲ್ ನಿರ್ಮಾಣಕ್ಕಾಗಿ ಶ್ರೀ ವೈಷ್ಣವ ಸಭಾ ಎಂಬ ಸಂಸ್ಥೆಗೆ 80×100 ಅಡಿ ಜಾಗವನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಾಸ್ಟೆಲ್ ಬದಲು ದೇವಾಲಯ ನಿರ್ಮಿಸಲಾಗಿದೆ ಎಂದು ದೂರು ಕೇಳಿ ಬಂದಿದೆ.

ಸ್ವಂತ ಜಾಗದಂತೆ ವರ್ತನೆ

ದೇವಾಲಯದ ಆಡಳಿತ ಮಂಡಳಿಯು ಈ ದೇವಸ್ಥಾನ ತಮ್ಮ ಸ್ವಂತ ಜಾಗದಂತೆ ಬಿಂಬಿಸಿ, ಸಾರ್ವಜನಿಕರು ಮತ್ತು ಭಕ್ತರಿಗೆ ವಂಚನೆ ಮಾಡುತ್ತಾರೆ. ದೇವಾಲಯಕ್ಕೆ ಭಕ್ತರಿಂದ ಹರಿದುಬರುವ ಕೋಟ್ಯಾಂತರ ರೂಪಾಯಿ ಹಣ, ಬಂಗಾರ, ಒಡವೆಗಳು ದುರುಪಯೋಗವಾಗುತ್ತಿವೆ ಎಂದು ಭಕ್ತರು ದೂರಿದ್ದರು.

ವೈಕುಂಠ ಏಕಾದಶಿಗೆ ಕಳಪೆ ಗುಣಮಟ್ಟದ ಪ್ರಸಾದ

ಗೌರವ ಕಾರ್ಯದರ್ಶಿಗಳಾಗಿದ್ದ ಶ್ರೀ ನರಸಿಂಹ ಅಯ್ಯಂಗಾರ್ ಅವರ ನಿಧನದ ನಂತರ, ಅವರ ಮಗ ಎಂ.ಎನ್. ರಾಮ್ ಮೋಹನ್ ದೇವಾಲಯದ ಆಡಳಿತ ನೋಡಿಕೊಳ್ಳುತ್ತಿದ್ದಾರೆ. ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣ ಹಾಗೂ ಆಹಾರ ಧಾನ್ಯ ದುರುಪಯೋಗವಾಗಿದೆ. ಭಕ್ತರಿಗೆ ಕಳಪೆ ಗುಣಮಟ್ಟದ ಪ್ರಸಾದ ವಿತರಿಸಲಾಗುತ್ತಿದೆ ಎಂದು ಭಕ್ತರ ಆರೋಪವಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top