ದಾವಣಗೆರೆ: ಪ್ರಚೋದನಾತ್ಮಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಇತ್ತೀಚಿಗೆ ದಾವಣಗೆರೆ ನಗರದಲ್ಲಿ ವಕ್ಫ್ ಮಸೂದೆ -2025 ಬಿಲ್ ವಿರುದ್ಧವಾಗಿ ಪ್ರಚೋದನಾತ್ಮಕವಾಗಿ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸದರಿ ವಿಡಿಯೋ ಆಧರಿಸಿ ಸದರಿ ವಿಡಿಯೋ ಸಂಬಂಧ ಕಾಂಗ್ರೆಸ್ ಮುಖಂಡ ಅಹಮ್ಮದ್ ಕಬೀರ್ ಖಾನ್ ಮತ್ತು ಇತರೆಯವರ ವಿರುದ್ಧ ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಲಾಗಿತ್ತು.
ಈ ಪ್ರರಕಣದ ಆರೋಪಿತರ ಪತ್ತೆ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್,ಎಎಸ್ಪಿ ವಿಜಯಕುಮಾರ ಎಂ ಸಂತೋಷ್ & ಮಂಜುನಾಥ ಹಾಗೂ ಡಿವೈಎಸ್ಪಿ ಶರಣಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ಆಜಾದ್ ನಗರ ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ ಹಾಗೂ ಅಧಿಕಾರಿ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು. ಈ ತಂಡ ಪ್ರಕರಣದಲ್ಲಿನ ಆರೋಪಿ ಎ2. ಅಬ್ದುಲ್ ಗನಿ (56), ಭಾಷನಗರ, ದಾವಣಗರ, ಎ3. ಮಹಮ್ಮದ್ ಜುಬೇರ್ (40) , ಭಾಷನಗರ, ದಾವಣಗೆರೆ ಇವರನ್ನು ಬಂಧಿಸಕಾಗಿದೆ. ಎ1 ಆರೋಪಿತನನ್ನು ಶೀಘ್ರದಲ್ಲಿಯೇ ಬಂಧಿಸುವ ಸಾಧ್ಯತೆ ಇದೆ.
ಪ್ರಕರಣದ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ: ದಾವಣಗೆರೆ ಜಿಲ್ಲೆಯ ಸಾರ್ವಜನಿಕರ ವಾಟ್ಸ್ಆಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ಗಳು ವಿಶೇಷವಾಗಿ ವಕ್ಷ್ ಬಿಲ್ ಸಂಬಂಧಿಸಿದಂತೆ ಹಾಗೂ ಇತ್ಯಾದಿ ಅಕ್ಷೇಪರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಮತ್ತು ಶೇರ್ ಮಾಡುವುದು, ಕೆಟ್ಟದಾಗಿ ಕಾಮೇಂಟ್ ಮಾಡುವುದು ಕಾನೂನಿಗೆ ಬಾಹಿರವಾಗಿದ್ದು, ಅಂತ ಪೋಸ್ಟ್ಗಳನ್ನು ಮಾಡುವಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲಾತಾಣಗಳ ಬಳಕೆಯಲ್ಲಿರಲಿ ಎಚ್ಚರ ಎಂದು ಈ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷಕಕರು ತಿಳಿಸಿದ್ದಾರೆ.