ದಾವಣಗೆರೆ: ದಾವಣಗೆರೆಯಲ್ಲಿ ಜನವರಿ 4 ಮತ್ತು 5 ರಂದು ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಲೋಗೋವನ್ನು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಬೆಂಗಳೂರಿನ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮೇಯರ್ ಚಮನ್ ಸಾಬ್ ಕೆ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ದೂಡಾ ಆಯುಕ್ತ ತಿಮ್ಮಣ್ಣ ಹುಲ್ಲುಮನೆ, ಯುವಜನ ಸೇವೆ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಸಮರ್ಥ ಶಾಮನೂರು, ಪಾಲಿಕೆ ಸದಸ್ಯ ಸಾಗರ್ ಎಲ್.ಹೆಚ್. ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತರಾದ ಮಂಜುನಾಥ್ ಮಾಗನಹಳ್ಳಿ ಶಂಭು ಉರೇಕೊಂಡಿ, ಶಿವರತ್ನನ್, ರಂಗಸ್ವಾಮಿ, ತಾಹಿರ್, ಮುಜಾಹಿದ್ ಪಾಷ, ನವೀನ್ ಕಕ್ಕರಗೊಳ್ಳ, ತಿಪ್ಪೇಶ್ ಮತ್ತಿತರರು ಇದ್ದರು.



