ಡಿವಿಜಿ ಸುದ್ದಿ, ಚನ್ನಗಿರಿ: ತಾಲೂಕಿನ ಹಿರೇ ಕೋಗಲೂರು ಗ್ರಾಮದಲ್ಲಿ ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ರುದ್ರಮ್ಮ, ಕೋಟ್ಯಪ್ಪ ಎಂಬುವರ ಸರ್ಕಾರಿ ಗೋಮಾಳ ಜಮೀನಿನಲ್ಲಿ ಮಧ್ಯಾಹ್ನ ಯಾರೋ ದುಶ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಸುಮಾರು 1 ಲಕ್ಷದ 55 ಸಾವಿರ ಬೆಲೆಬಾಳುವ ಮೆಕ್ಕೆಜೋಳ ಸುಟ್ಟು ಹೋಗಿದೆ. ವಿಷಯ ತಿಳಿದ ಗ್ರಾಮಸ್ಥರು ಅಗ್ನಿ ಶಾಮಕದಳಕ್ಕೆ ತಿಳಿಸಿದ್ದಾರೆ. ಕೂಡಲೇ ಬಂದ ಅಗ್ನಿಶಾಮಕದಳ ಬೆಂಕಿಯನ್ನು ನಂದಿಸಿದ್ದಾರೆ .
ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿಯಾದ ಕೆ.ಹೆಚ್. ತಿಲಕ್ ಕುಮಾರ್ ಆಗಮಿಸಿ ಮಹಜರ್ ನಡೆಸಿದರು. ಸಂತ್ರಸ್ತರಿಗೆ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು. ಬಿ.ಜಿ ಸ್ವಾಮಿ , ಕೆಪಿ ವೆಂಕಟೇಶ್ , ರವೀಂದ್ರಕುಮಾರ್ , ಶಂಕ್ರಪ್ಪ ಹಾದಿಮನೆ ಸೇರಿದಂತೆ ಇನ್ನಿತರ ಗ್ರಾಮಸ್ಥರು ಬೆಂಕಿಯನ್ನು ನಂದಿಸುವಲ್ಲಿ ಸಹಾಯಕರಾದರು.



