ದಾವಣಗೆರೆ: ಒಂದೇ ಕೋಣಕ್ಕೆ ಜಿಲ್ಲೆಯ ಎರಡು ಗ್ರಾಮಗಳ ಮಧ್ಯೆ ಗಲಾಟೆ ನಡೆದಿದೆ. ಇದು ನಮ್ಮ ಊರಿನ ಕೋಣ ಎಂದು ಹರಿಹರ ತಾಲ್ಲೂಕಿನ ಕುಣಿಬೆಳಕೆರೆ ಗ್ರಾಮಸ್ಥರ ವಾದವಾದ್ರೆ, ಮತ್ತೊಂದೆಡೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮಸ್ಥರು ಕೂಡ ಇದೇ ನಮ್ಮ ಊರಿನ ಕೋಣ ಎಂದು ವಾದಕ್ಕೆ ಇಳಿದಿದ್ದಾರೆ.
- ಒಂದೇ ಕೋಣಕ್ಕೆ ಎರಡು ಊರುಗಳ ಮಧ್ಯೆ ಗಲಾಟೆ
- ಹರಿಹರ ತಾಲ್ಲೂಕಿನ ಕುಣಿಬೆಳಕೆರೆ, ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮಸ್ಥರ ನಡುವೆ ಗಲಾಟೆ
- ಎರಡೂ ಗ್ರಾಮಗಳ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲು ದೂರು ದಾಖಲು
- ಕುಣಿಬೆಳಕೆರೆ ಗ್ರಾಮಸ್ಥರು ನಮ್ಮದು 8 ವರ್ಷ ಕೋಣ ಎಂದರೆ, ಕುಳಗಟ್ಟೆ ಗ್ರಾಮಸ್ಥರು ನಮ್ಮದು 3 ವರ್ಷ ಎಂದಿದ್ದರು
- ವೈದ್ಯರು ಕೋಣದ ಹಲ್ಲುಗಳನ್ನು ಪರಿಶೀಲಿಸಿದ್ದಾಗ 6 ವರ್ಷದ ಕೋಣ ಎಂದು ಗೊತ್ತಾಗಿದೆ
- ಕೋಣ ಎರಡು ಗ್ರಾಮಸ್ಥರದ್ದಲ್ಲ ಎಂದು ಶಿವಮೊಗ್ಗದ ಗೋಶಾಲೆಗೆ ಬಿಟ್ಟ ಪೊಲೀಸರು
ಒಂದೇ ಕೋಣಕ್ಕೆ ಎರಡು ಊರಿನ ನಡುವಿನ ಗಲಾಟೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕೋಣವನ್ನು ಪೊಲೀಸರು ವಶಕ್ಕೆ ಪಡೆದ ಗೋಶಾಲೆ ಸೇರಿಸಿದ್ದಾರೆ. ಎರಡೂ ಗ್ರಾಮಗಳ ಗ್ರಾಮಸ್ಥರು ಕೋಣ ತಮ್ಮದೆಂದು ಪರಸ್ಪರ ಕಿತ್ತಾಡಿಕೊಂಡು ಆಯಾ ಗ್ರಾಮದ ಮಲೆಬೆನ್ನೂರು ಠಾಣೆ ಹಾಗೂ ಹೊನ್ನಾಳಿ ಠಾಣೆಗೆ ದೂರು ನೀಡಿದ್ದಾರೆ. ಕುಣೆಬೆಳಕೆರೆ ಗ್ರಾಮಸ್ಥರು ನಮ್ಮ ಕೋಣ 8 ವರ್ಷದ್ದು ಎಂದರೆ, ಕುಳಗಟ್ಟೆ ಗ್ರಾಮಸ್ಥರು ನಮ ಕೋಣ 3 ವರ್ಷದ್ದು ಎಂದು ಹೇಳುತ್ತಿದ್ದರು.
ಕೋಣ ಯಾರಿಗೆ ಸೇರಿದ್ದು ಎಂದು ತಿಳಿಯಲು ಪೊಲೀಸರು ಪಶು ವೈದರ ಮೊರೆ ಹೋದಾಗ, ವೈದ್ಯರು ಕೋಣದ ಹಲ್ಲುಗಳನ್ನು ಪರಿಶೀಲಿಸಿ 6 ವರ್ಷದ ಕೋಣ ಎಂದು ದೃಢಪಡಿಸಿದ್ದಾರೆ. ಈ ಕೋಣ ಎರಡು ಗ್ರಾಮಸ್ಥರದ್ದಲ್ಲ. ಇದು ದೇವರಿಗೆ ಬಿಟ್ಟಿರುವ ಕೋಣ ಎಂದು ಗೊತ್ತಾಗಿದೆ. ದೇವರ ಕೋಣವನ್ನು ಪೊಲೀಸರು ಶಿವಮೊಗ್ಗದ ಗೋಶಾಲೆಗೆ ಬಿಟ್ಟಿದ್ದಾರೆ.



