ದಾವಣಗೆರೆ: ನಿಮಗೆ ತಾಕತ್ ಇದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೆಳಗಿಳಿಸಿ ಎಂದು ಬಿಜೆಪಿ ರೆಬಲ್ ನಾಯಕರಿಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ವರಿಷ್ಠರು ಬಿ.ವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಮಾಡಿದ್ದಾರೆ. ಕೇಂದ್ರ ನಾಯಕರಿಗೆ ಬೆಲೆ ಕೊಡದೇ ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡುವ ರೆಬಲ್ ನಾಯಕರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ವಿಜಯೇಂದ್ರ ಕೇಳಗಿಳಿಸಿ ನೋಡಿ ಎಂದು ಕಿಡಿಕಾರಿದರು.
- ರೆಬಲ್ ನಾಯಕರಿಗೆ ರೇಣುಕಾಚಾರ್ಯ ಸವಾಲು
- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿ
- ತಾಕತ್ ಇದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೆಳಗಿಳಿಸಿ ನೋಡಿ
- ವಾಲ್ಮೀಕಿ, ಮೂಡಾ ಹಗರಣ ಹಾಗೂ ವಕ್ಫ್ ವಿರುದ್ಧ ವಿಜಯೇಂದ್ರ ನೇತ್ವದಲ್ಲಿ ಹೋರಾಟ
ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಬಿಜೆಪಿ ಇನ್ನಷ್ಟು ಬಲಿಷ್ಟವಾಗಿದೆ. ಪಕ್ಷಕ್ಕೆ ಹೊಸ ರೂಪ ಬಂದಿದೆ. ಸರ್ಕಾರದ ವಾಲ್ಮೀಕಿ, ಮೂಡಾ ಹಗರಣ ಹಾಗೂ ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಸಾಥ್ ನೀಡದೆ, ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡುವ ನಾಯಕರು ಯಾವ ಹೋರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಿಂದ ಉಚ್ಚಾಟನೆ ಆಗಿ ಜೆಡಿಎಸ್ ಗೆ ಹೋಗಿದ್ರಿ ಬಂದು, ಟೀಪು ಸುಲ್ತಾನ್ ಡ್ರೆಸ್ ಹಾಕಿ, ಖಡ್ಗ ಹಿಡಿದಿದ್ದು ಮರ್ತಿದಿರಾ..? ಈಗ ಹಿಂದೂ ಹುಲಿ ನಾ..? ಯಡಿಯೂರಪ್ಪ. ಕರ್ನಾಟಕದಲ್ಲಿ ಬಿಜೆಪಿ ಪಾರ್ಟಿ ಕಟ್ಟಿ ಬೆಳೆಸಿದ್ದಕ್ಕೆ, ಇವತ್ತು ನೀವು ಶಾಸಕರಾಗಿದ್ದೀರಿ. ಯಡಿಯೂರಪ್ಪ ಕೈ ಕಾಲು ಹಿಡಿದು ಬಿಜೆಪಿಗೆ ಬಂದಿದ್ದು ಮರೆತಿದ್ದಿರಾ..? ನೀವು ಒಬ್ಬರು ರಾಜೀನಾಮೆ ಕೋಡಬೇಕಾ..? ಕಾಂಗ್ರೆಸ್ ಜತೆ ಶಾಮಿಲಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಯತ್ನಾಳ್ ವಿರುದ್ಧ ಕಿಡಿ ಕಾರಿದ್ದಾರೆ.
ಯಾವುದೇ ಪಕ್ಷ ನಿಷ್ಠೆ ಇಲ್ಲದ ನೀವು, ಇದೇ ರೀತಿ ಮುಂದುವರೆಸಿದ್ರೆ ನಾವು ಮುಂದಿನ ದಿನಗಳಲ್ಲಿ ಉತ್ತರ ಕೊಡಬೇಕಾಗುತ್ತೆ. ಉಪ ಚುನಾವಣೆ ಮುಗಿದ ಬಳಿಕ ಜಿಲ್ಲಾ ಮಟ್ಟದ ಎಲ್ಲಾ ನಾಯಕರ ಸಭೆ ನಡೆಸಿ ಕೇಂದ್ರ ನಾಯಕ ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಎಚ್ಚರಿಕೆ ನೀಡಿದರು.



