ದಾವಣಗೆರೆ: ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅಕ್ಟೋಬರ್ 29 ರಂದು ಜಿಲ್ಲೆಯ ರೈತರಿಗೆ ಸುಸ್ಥಿರ ಕೃಷಿ-ಸ್ವಾವಲಂಭಿ ಜೀವನಕ್ಕಾಗಿ ನೂತನ ತಾಂತ್ರಿಕತೆಗಳ ಕುರಿತು ಒಂದು ದಿನದ ತರಬೇತಿ ಆಯೋಜಿಸಲಾಗಿದೆ.
ಪ್ರಗತಿ ಪರ ರೈತರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಲಿಕೆರೆಯ ವಿಶ್ವೇಶ್ವರ ಹೆಚ್ ಸಜ್ಜನ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ್ ಟಿ.ಎನ್. ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ, ತೋಟಗಾರಿಕಾ ತಜ್ಞ ಬಸವನಗೌಡ ಎಂ.ಜಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಸುಸ್ಥಿರ ಕೃಷಿಗೆ ಪೂರಕವಾಗಿ ಇಲಾಖೆಯಿಂದ ದೊರೆಯುವ ಯೋಜನೆಗಳ ಕುರಿತು ಮಾಹಿತಿಯನ್ನು ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಆರ್. ತರಬೇತಿಯಲ್ಲಿ ವಿಷಯ ಮಂಡಿಸುವರು. ತರಬೇತಿಯಲ್ಲಿ ಭಾಗವಹಿಸಲು 35 ರೈತರಿಗೆ ಮಾತ್ರ ಅವಕಾಶವಿದೆ. ಆಸಕ್ತ ರೈತ, ರೈತ ಮಹಿಳೆಯರು ಅ.26 ರೊಳಗಾಗಿ ಮೊ.ಸಂಖ್ಯೆ: 9844295795, 9901640184 ಗೆ ಸಂಪರ್ಕಿಸಿ ನೋಂದಾಯಿಸಲು ಹಾಗೂ ತರಬೇತಿಯಲ್ಲಿ ಭಾಗವಹಿಸುವ ರೈತರು ಕಡ್ಡಾಯವಾಗಿ ಎಫ್‍ಐಡಿ ಸಂಖ್ಯೆ ಅಥವಾ ಚುನಾವಣಾ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕೆಂದು ಕಾಡಜ್ಜಿಯ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.