ದಾವಣಗೆರೆ: ಲೋಕಾಯುಕ್ತ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 2 ಲಕ್ಷ ರೂಪಾಯಿ ಲಂಚ ಪಡೆಯುವಾಗ ಹರಿಹರ ನಗರಸಭೆ ಪೌರಾಯುಕ್ತ ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಹರಿಹರ ನಗರಸಭೆ ಪೌರಾಯುಕ್ತ ಬಸವರಾಜ್ ಐಗೂರು ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದವರು. ಸಾಮಾಗ್ರಿ ಸರಬರಾಜು ಗುತ್ತಿಗೆದಾರ ಕರಿಬಸಪ್ಪ ಎಂಬುವವರಿಂದ ಬಿಲ್ ನೀಡಲು ಎರಡು ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ದಾಳಿ ಮಾಡಿದ್ದಾರೆ. ಹರಿಹರ ನಗರದ ವಿದ್ಯಾನಗರದಲ್ಲಿರುವ ವಾಸವಿದ್ದ ರೂಮಿನಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಸಾಮಗ್ರಿ ಸರಬರಾಜು ಮಾಡಲು ಕರಿಬಸಪ್ಪ ಎಂಬ ಗುತ್ತಿಗೆದಾರ ಅನುಮತಿ ಪಡೆಯಲು ಹೋಗಿದ್ದರು. ಈ ವೇಳೆ ಎರಡು ಲಕ್ಷ ರೂಪಾಯಿಗೆ ಹರಿಹರ ನಗರಸಭೆ ಆಯುಕ್ತ ಬಸವರಾಜ್ ಐಗೂರು ಬೇಡಿಕೆ ಇಟ್ಟಿದ್ದರು. ಇಂದು 2 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆಯುಕ್ತ ಬಸವರಾಜ್ ಐಗೂರು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.