ದಾವಣಗೆರೆ: ಕೇಂದ್ರದಲ್ಲಿ ರಚನೆ ಆಗಿರುವುದು ಕಿಚಡಿ ಸರ್ಕಾರ. ಎಲ್ಲರಿಗೂ ಪ್ರಧಾನಿ ಹಾಗೂ ಪ್ರಭಾವಿ ಸಚಿವ ಸ್ಥಾನಗಳ ಮೇಲೆ ಆಸೆ ಇರುತ್ತದೆ. ಹೀಗಾಗಿ ಬಹಳ ದಿನ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಎನ್‌ಡಿಎ ಪಾಲುದಾರರಾಗಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಆಂಧ್ರದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿಯಂತೆ ಕಾಡಲಿದ್ದಾರೆ ಎಂದರು.
ಮೋದಿ ಸರ್ಕಾರ ಬಹಳ ದಿನ ಮುಂದುವರಿಯುವುದಿಲ್ಲ. ಬಿಜೆಪಿಗೆ ಈಗಿರುವ ಸ್ಥಾನಕ್ಕಿಂತ ಹತ್ತು ಸ್ಥಾನಗಳು ಕಡಿಮೆ ಬಂದಿದ್ದರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ಎಷ್ಟೇ ಮೋದಿ ಜಪ ಮಾಡಿದರೂ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ ಎಂದು ಹೇಳಿದರು.



