ದಾವಣಗೆರೆ: ಜಿಲ್ಲೆಯ ಚನ್ನಗಿರಿ ಠಾಣೆಯಲ್ಲಿ ಪ್ರಕರಣವೊಂದರ ಆರೋಪಿ ವಿಚಾರಣೆಗೆ ಕರೆ ತಂದಿ️ದ್ದ ವೇಳೆ ರಾತ್ರಿ ಮೃತಪಟ್ಟಿದ್ದಾನೆ. ಇದೊಂದು ಲಾಕಪ್ ಡೆತ್ ಎಂದು ಆರೋಪಿಸಿದ ಗುಂಪುವೊಂದು ಪೊಲೀಸ್ ಠಾಣೆಗೆ ನುಗ್ಗಿ, ಕಲ್ಲು ತೂರಾಟ ನಡೆಸಿ ಪೀಠೊಪಕರಣ ಧ್ವಂಸಗೊಳಿಸಿದ್ದಾರೆ.
ಚನ್ನಗಿರಿ ಪಟ್ಟಣದ ಟಿಪ್ಪು ನಗರದ ನಿವಾಸಿ ಆದಿ️ಲ್(32) ಎಂಬಾತ ಕಾರ್ಮೆಂಟರ್ ಕೆಲಸ ಮಾಡುತ್ತಿದ್ದ.ಒಸಿ ಆಡಿಸುತ್ತಿದ್ದ ಎಂಬ ಆರೋಪ ಇತ್ತು. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಚನ್ನಗಿರಿ ಠಾಣೆ ಪೊಲೀಸರು ವಿಚಾರಣೆಗಾಗಿ ಕರೆ ತಂದಿ️ದ್ದರು. ಕೆಲ ಹೊತ್ತಿನ ಬಳಿಕ ಆದಿ️ಲ್ ಕುಸಿದು ಬಿದ್ದಿದ್ದಾನೆ . ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಆದಿ️ಲ್ಗೆ ಫಿಟ್ಸ್, ಲೋ ಬಿಪಿ ಆಗಿದ್ದರಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಕುಟುಂಬಸ್ಥರು ಪೊಲೀಸರು ಹೊಡೆದು ಹತ್ಯೆ ಮಾಡಿದ್ದಾರೆ. ಇದು ಲಾಕಪ್ ಡೆತ್ ಎಂದು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಕಲ್ಲು ತೂರಿ, ಪಿಠೋಪಕರಣ ಧ್ವಂಸ ಮಾಡುತ್ತುದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಿ, ಲಘು ಲಾಠಿ ಪ್ರಹಾರ ನಡೆಸಲಾಗಿದೆ.
ತಡರಾತ್ರಿ ಠಾಣೆ ಎದುರು ಜಮಾಯಿಸಿ ಆದಿ️ಲ್ ಮೃತದೇಹವಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಡಿವೈಎಸ್ಪಿ ಪ್ರಶಾಂತ ಮುನವಳ್ಳಿ, ಪಿಎಸ್ಐ ಬಿ.ನಿರಂಜನ್ ಧರಣಿ ನಿರತರನ್ನು ಸಮಾಧಾನ ಮಾಡಲು ಯತ್ನಿಸಿದರರೂ ಸಮಾಧಾನಗೊಳ್ಳಲಿಲ್ಲ. ಕಲ್ಲು ತೂರಾಟಕ್ಕೆ ಮೂರು ಪೊಲೀಸ್ ಜೀಪ್ ಗಳಿಎ ಹಾನಿ ಮಾಡಲಾಗಿದೆ. ಬಂದೋಬಸ್ತ್ ಬಂದಿ️ದ್ದ ಮಾಯಕೊಂಡ ಠಾಣೆ ಇನ್ಸ್ ಪೆಕ್ಟರ್ ಜೀಪನ್ನ ಧ್ವಂಸ ಮಾಡಿದ್ದಾರೆ. ಠಾಣೆಯ ಕಿಟಕಿ ಗಾಜುಗಳ ಒಡೆದು ಹಾಕಿದ್ದು, ಠಾಣೆ ಎದುರಿದ್ದ ಧ್ವಂಜ ಸ್ಥಂಭವ ಕಿತ್ತೆಸೆದಿ️ದ್ದಾರೆ. ಠಾಣೆಯೊಳಗೆ ನುಗ್ಗಿ ಅಲ್ಲಿನ ಪೀಠೊಪಕರಣ ಮುರಿದಿದ್ದಾರೆ.
ಈ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಮುಖ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ಬೂದಿ️ ಮುಚ್ಚಿದ ಕೆಂಡದಂತಿದೆ.



