ದಾವಣಗೆರೆ; ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಗುಮಾಸ್ತ, ಕಿರಿಯ ಸಹಾಯಕ ಕಾರ್ಯದರ್ಶಿ ಮತ್ತು ದತ್ತಾಂಶ ನಮೂದಕ ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ಕಂಬೈನ್ಡ್ ಹೈಯರ್ ಸೆಕೆಂಡರಿ (10+2) ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು, ಆಸಕ್ತ ಅಭ್ಯರ್ಥಿಗಳು ವೆಬೆಸೈಟ್ https://ssc.gov.in or www.sskkr.kar.nic.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ವಯೋಮಿತಿ 18 ರಿಂದ 27 ವರ್ಷಗಳು(ನಿಯಮಾನುಸಾರ ಸಡಿಲಿಕೆ ಇದೆ). ಅರ್ಜಿ ಸಲ್ಲಿಸಲು ಮೇ.7 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-25502520 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ. ದೂ.ಸಂ: 08192-259446 ಇಲ್ಲಿಗೆ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.



