Connect with us

Dvgsuddi Kannada | online news portal | Kannada news online

ನಾಳೆಯಿಂದ ಹಳೇಬೀಡಿನಲ್ಲಿ ‘ತರಳಬಾಳು ಹುಣ್ಣಿಮೆ ಮಹೋತ್ಸವ’; ಜ್ಞಾನದಾಸೋಹ ಮಂಟಪದ ಅಂತಿಮ ಸಿದ್ಧತೆ

ಪ್ರಮುಖ ಸುದ್ದಿ

ನಾಳೆಯಿಂದ ಹಳೇಬೀಡಿನಲ್ಲಿ ‘ತರಳಬಾಳು ಹುಣ್ಣಿಮೆ ಮಹೋತ್ಸವ’; ಜ್ಞಾನದಾಸೋಹ ಮಂಟಪದ ಅಂತಿಮ ಸಿದ್ಧತೆ

ಡಿವಿಜಿ ಸುದ್ದಿ, ಹಳೇಬೀಡು:  ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ  ‘ತರಳಬಾಳು ಹುಣ್ಣಿಮೆ ಮಹೋತ್ಸವ’ ನಾಳೆಯಿಂದ ಫೆ.1 ರಿಂದ 9ರವೆಗೆ ಅದ್ದೂರಿಯಾಗಿ ಹಳೇಬೀಡಿನಲ್ಲಿ  ಜರುಗಲಿದೆ. ಈ ಬಾರಿ ಅತಿಥ್ಯ ವಹಿಸಿರುವ ಹಳೇಬೀಡು ಸಕಲ ರೀತಿಯಲ್ಲಿ ಸಿದ್ಧಗೊಂಡಿದ್ದು,  ಮಹೋತ್ಸವದ ಮುಖ್ಯ ವೇದಿಕೆ  ಹೊಯ್ಸಳೇಶ್ವರ ಮಂಟಪ ಅಂತಿಮ ಸ್ವರೂಪ ನಡೆಯುತ್ತಿದೆ.

ಮಂಟಪದಲ್ಲಿ ಮಹಾಪುರುಷರ ಚಿತ್ರಗಳು ಹಾಗೂ ವಚನಗಳ ಸಾಲುಗಳ ಫಲಕಗಳನ್ನು ತೂಗು ಹಾಕಲಾಗಿದ್ದು, ಜ್ಞಾನದಾಸೋಹದ ಮಹಾಮಂಟಪ ಎಲ್ಲರನ್ನೂ ಆಕರ್ಷಿಸುತ್ತಿದೆ. ಹಳೇಬೀಡಿನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಹೊಯ್ಸಳೇಶ್ವರ ಮಂಟಪದಲ್ಲಿ ವಚನಕಾರರ ಚಿತ್ರಗಳನ್ನು ಅಳವಡಿಸಲಾಗಿದೆ. ಸ್ಥಳೀಯರು ಕುತೂಹಲದಿಂದು ಬಂದು ಮಹೋತ್ಸವ ಮಂಟಪವನ್ನು  ವೀಕ್ಷಣೆ ಮಾಡುತ್ತಿದ್ದಾರೆ. ಬಸವೇಶ್ವರ, ಅಕ್ಕಮಹಾದೇವಿ, ಅಲ್ಲಮಪ್ರಭು, ದಾಸಿಮಯ್ಯ, ಚನ್ನಬಸವಣ್ಣ ಮೊದಲಾದವರ ಚಿತ್ರಗಳನ್ನು ಹಾಕಲಾಗಿದೆ. 12ನೇ ಶತಮಾನದ ವಚನಕಾರರು ಮಾತ್ರವಲ್ಲದೆ, ಲಿಂಗೈಕ್ಯ ಶ್ರೀ  ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ತರಳಬಾಳು ಮಠದ ಈಗಿನ ಪೀಠಾಧ್ಯಕ್ಷರಾದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ನುಡಿಗಳಿಂದ ತುಂಬಿರುವ ಫಲಕಗಳು ಸಹ ಭಕ್ತರ ಗಮನ ಸೆಳೆದಿವೆ.

‘ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಜ್ಞಾನದಾಸೋಹದ ಮಹಾಮಂಟಪದ ಅಂತಿಮ ಕೆಲಸ ಭರದಿಂದ ಸಾಗುತ್ತಿದೆ. ವಿಚಾರಪೂರ್ಣವಾದ ಗೋಷ್ಠಿಗಳನ್ನು , ಕುಸ್ತಿ ಜೊತೆಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅಂಗಡಿ, ಹೋಟೆಲ್‌ ಮಾತ್ರವಲ್ಲದೆ, ಪುಸ್ತಕ ಮಾರಾಟ ಹಾಗೂ ಸರ್ಕಾರದ ವಿವಿಧ ಇಲಾಖೆಯ ಯೋಜನೆಯ ಮಳಿಗೆಗಳು 9 ದಿನ ತೆರೆದಿರುತ್ತವೆ. ಕಾರ್ಯಕ್ರಮದ ಯಶಸ್ಸಿಗೆ ಸ್ಥಳೀಯರು ಕೈಜೋಡಿಸಬೇಕು’ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ತಿಳಿಸಿದ್ದಾರೆ.

ಸಿರಿಗೆರೆಯಲ್ಲಿ ಪಾದಯಾತ್ರೆ

ನಾಳೆ (ಫೆ.1 ) ರಂದು ಸಿರಿಗೆರೆಯಿಂದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಹೊರಡಲಿದ್ದು, ಹಳೇಬೀಡಿಗೆ ಹೊರಡುವ ಮುನ್ನ ಐಕ್ಯಮಂಟಪದಲ್ಲಿ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಕಂಚಿನ ಪುತ್ಥಳಿ ಮತ್ತು ಗುರು ಶಾಂತರಾಜದೇಶಿಕೇಂದ್ರ ಪ್ರತಿಮೆ ಹಾಗೂ ಗದ್ದುಗೆ ಪೂಜೆ ಸಲ್ಲಿಸಿ ಶಿವಧ್ವಜಾರೋಹಣ ನೆರವೇರಿಸಲಿದ್ದಾರೆ.

ಧ್ವಜಾರೋಹಣ ನೆರವೇರಿಸಿದ  ನಂತರ ಸಿರಿಗೆರೆ ಗ್ರಾಮದ ಬೀದಿಗಳಲ್ಲಿ ಪಾದಯಾತ್ರೆ ನಡೆಸಲಿದ್ದಾರೆ. ಬೆಳಗ್ಗೆ 10  ಗಂಟೆಗೆ ಸಿರಿಗೆರೆಯಿಂದ ಹೊರಡಲಿರುವ ಸ್ವಾಮೀಜಿಗಳು ಜಮ್ಮೇನಹಳ್ಳಿ, ಸಿದ್ದಾಪುರ , ಡಿ ಮೇದಕೇರಿಪುರ, ಮುತ್ತದದೂರು, ಸಂತೇಬೆನ್ನೂರು, ಕೂಟಗೇಹಳ್ಳಿ, ಅಬ್ಬೆಗೆರೆ, ಅಂತಾಪುರ ಗೇಟ್, ಅಗರಿಬಿನ್ನಿಹಟ್ಟಿ ಚನ್ನಗಿರಿ, ಮರವಂಜಿ, ನಲ್ಲಿಹಕ್ಲು ಗೇಟ್, ಢಣಾಯಕಪುರ, ಅತ್ತಿಮೊಗ್ಗೆ, ಬೀರೂರು, ಕಡೂರು, ಚಟ್ನಿಳ್ಳಿ, ಜಾವಗಲ್ ಮಾರ್ಗವಾಗಿ ಸಂಜೆ 5.30ಕ್ಕೆ ಹಳೇಬೀಡು ತಲುಪಲಿದ್ದಾರೆ.

ಶ್ರೀಗಳ ಜೊತೆ ಹಳೇಬೀಡಿಗೆ ತೆರಳುವ ಭಕ್ತರಿಗಾಗಿ ಕಡೂರಿನ ವೇದಾವತಿ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು  ಯಾವುದೇ ಕಾರಣಕ್ಕೂ ಫ್ಲೆಕ್ಸ್ , ಬ್ಯಾನರ್ ಗಳನ್ನು  ಹಾಕಬಾರು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top