ಧರ್ಮಗಳು ಹತ್ತಾರಾದರೂ
ಮನೋಧರ್ಮವು ಒಂದೇ
ಭಾಷೆಗಳು ನೂರಾರಾದರೂ
ಅಭಿಲಾಷೆಯು ಒಂದೇ.
ರಾಜ್ಯಗಳು ಇಪ್ಪತ್ತೆಂಟಾದರೂ
ಏಕತೆಯ ಸಾಮ್ರಾಜ್ಯವು ಒಂದೇ
130 ಕೋಟಿ ಕಂಠಗಳಾದರೂ
ರಾಷ್ಟ್ರಗೀತೆಯು ಒಂದೇ.
256 ಕೋಟಿ ಕೈಗಳಾದರೂ
ಐಕ್ಯತೆಯ ಚಪ್ಪಳೆಯು ಒಂದೇ
ಸಂಸ್ಕೃತಿ ಹತ್ತು ಹಲವಾದರೂ
ಜೀವನ ಪ್ರೀತಿಯು ಒಂದೇ.
ಆರ್ಯ ದ್ರಾವಿಡರು ಬೇರೆಯಾದರೂ
ಭಾರತಾಂಬೆಯ ಮಡಿಲು ಒಂದೇ
ಗಂಗಾ ಕಾವೇರಿ ಬೇರೆಯಾದರೂ
ಹರಿಯುವ ಭೂ ಒಡಲು ಒಂದೇ.
ಕೇಸರಿ ಬಿಳಿ ಹಸಿರು ಬಣ್ಣ ಬೇರೆಯಾದರೂ
ಆಶೋಕ ಚಕ್ರದ ತ್ರಿವರ್ಣ ಧ್ವಜವೊಂದೇ.
ಜೀವನ ತತ್ವ ಸಿದ್ಧಾಂತಗಳು ಬೇರೆಯಾದರೂ
ಭಾರತೀಯರು ನಾವೆಲ್ಲರೂ ಒಂದೇ.
-ಶಿವಮೂರ್ತಿ.ಹೆಚ್, ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
9740050150



