ಡಿವಿಜಿ ಸುದ್ದಿ, ದಾವಣಗೆರೆ: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ದಾಯಾದಿಗಳ ಕಲಹಕ್ಕೆ 800 ಅಡಿಕೆ ಗಿಡಗಳು ಬಲಿಯಾದ ಘಟನೆ ನಡೆದಿದೆ.
ಜಮೀನ ವ್ಯಾಜ್ಯ ಹಿನ್ನೆಲೆ ನಟರಾಜ್ ಎನ್ನುವರಿಗೆ ಸೇರಿದ 800 ಅಡಿಕೆ ಮರವನ್ನು ನಾಶ ಮಾಡಲಾಗಿದೆ. ಧಾರವಾಡ ವಿಶ್ವ ವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿರುವ ಪಾಲಾಕ್ಷಪ್ಪ ಈ ಕೃತ್ಯ ಎಸಗಿದ್ದಾರೆ ಎಂದು ನಟರಾಜ್ ದೂರಿದ್ದಾರೆ.
ಪಾಲಾಕ್ಷಪ್ಪ ಅಣ್ಣನ ಮಗ ನಟರಾಜ್ ಬೆಳಸಿದ್ದ 8 ತಿಂಗಳ ಅಡಿಕೆ ಗಿಡಗಳು ನಾಶ ಮಾಡಲಾಗಿದ್ದು, ಕಷ್ಟಪಟ್ಟು ಬೆಳೆಸಿದ ಅಡಿಕೆ ಬೆಳೆ ನಾಶವಾಗಿದ್ದಕ್ಕೆ ನಟರಾಜ್ ರೋಧಿಸುತ್ತಿದ್ದಾನೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾಲಾಕ್ಷಪ್ಪ ವಿರುದ್ದ ದೂರು ದಾಖಲಾಗಿದೆ.



