ಡಿವಿಜಿಸುದ್ದಿ.ಕಾಂ: ಸ್ಯಾಂಡಲ್‌ವುಡ್‌ನಲ್ಲಿ ಮಿನಿಮಮ್ ಪೈಸಾ ವಸೂಲ್ ಸ್ಟಾರ್ ನಟರ ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂಚೂಣಿಯಲ್ಲಿದ್ದಾರೆ. ಅವರು ಅಭಿನಯಿಸಿದ ಯಜಮಾನ ಇತ್ತೀಚೆಗೆ ನೂರು ದಿನ ಪೂರೈಸಿದೆ. ಕುರುಕ್ಷೇತ್ರ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಸಿನಿಮಾಗಳಿಗೆ ಹಾಕಿದ ಬಂಡವಾಳ ವಾಪಸ್ ಬರುವ ಗ್ಯಾರಂಟಿ ಇರುವುದರಿಂದ ನಿರ್ಮಾಪಕರು ಜಗ್ಗದಾದಾನ ಮನೆ ಮುಂದೆ ವರ್ಷಾನುಗಟ್ಟಲೆ ಕ್ಯೂ ನಿಂತಿರುತ್ತಾರೆ.
ಸಣ್ಣ ಕಲಾವಿದರು ಕೂಡಾ ಗಜನ ಸಿನಿಮಾದಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡರೆ ಅದನ್ನ ತಮ್ಮ ವಿಸಿಟಿಂಗ್ ಕಾರ್ಡ್ ಮಾಡಿಕೊಳ್ಳುತ್ತಾರೆ. ಅಂತಹದರಲ್ಲಿ ಹೀರೋಯಿನ್ ಆಗುವ ಅವಕಾಶ ಸಿಕ್ಕರೆ ಕೇಳಬೇಕಾ..? ಒಂದು ಚಾನ್ಸ್ ಸಿಕ್ಕರೆ ಸಾಕು ಅವರು ಸ್ಯಾಂಡಲ್‌ವುಡ್‌ನಲ್ಲಿ ಭದ್ರವಾಗಿ ನೆಲೆಯೂರಿದಂತೆಯೇ ಲೆಕ್ಕ. ಜೊತೆಗೆ ಸ್ಯಾಂಡಲ್‌ವುಡ್ ಟಾಪ್ 5 ಸ್ಟಾರ್ ನಟರ ಸಿನಿಮಾಗಳಲ್ಲಿ ಹೀರೋಯಿನ್ ಆಗುವ ಅವಕಾಶ ಸಿಗುವುದು ಖಚಿತ.

ಹೀಗೆ ಸಾರಥಿ ಚಿತ್ರದ ಮೂಲಕ ದೀಪ ಸನ್ನಿಧಿ, ಬುಲ್ ಬುಲ್ ಚಿತ್ರದ ಮೂಲಕ ರಚಿತಾ ರಾಮ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ಎಲ್ಲ ಸ್ಟಾರ್ ನಟರ ಜೊತೆ ಹೀರೋಯಿನ್ ಆಗಿ ತೆರೆ ಹಂಚಿಕೊಂಡಿದ್ದಾರೆ. ಇದೀಗ ಇವರ ಸಾಲಿಗೆ ರಾಬರ್ಟ್ ರಾಣಿ ಆಶಾಭಟ್ ಕೂಡ ಸೇರ್ಪಡೆಯಾಗುವ ಸುಳಿವು ಕೊಟ್ಟಿದ್ದಾರೆ. ಹೌದು.. ಆಶಾ ಭಟ್ ಅಚ್ಚ ಕನ್ನಡತಿ, ಭದ್ರವಾತಿಯ ಅಪ್ಪಟ ದೇಸಿ ಪ್ರತಿಭೆ. ರಚಿತಾ ರಾಮ್ ಹಾಗೂ ನಿಧಿ ಸುಬ್ಬಯ್ಯರಂತೆ ಆಶಾ ಭಟ್ ಕೂಡ ಕರುನಾಡಿನವಳಾದ್ದರಿಂದ ರಾಬರ್ಟ್ ಚಿತ್ರದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮಿಂಚಲಿದ್ದಾರೆ ಎಂದು ಸಿನಿಮಾ ಪರಿಣಿತರು ಭವಿಷ್ಯ ನುಡಿದಿದ್ದಾರೆ.



