ದಾವಣಗೆರೆ: ಜಿಲ್ಲೆಯ ಹರಿಹರದ ಶಿವಮೊಗ್ಗ-ಹೊಸಪೇಟೆ ಹೆದ್ದಾರಿಯ ಎಪಿಎಂಸಿ ಎದುರು ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದಾಗ ಯಮರೂಪಿಯಾಗಿ ಬಂದ ಟ್ಯಾಂಕರ್ ಲಾರಿಯೊಂದು ಡಿಕ್ಕಿ ಹೊಡೆದೆ. ಇದರಿಂದ ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಎಂ.ಎಚ್. ಹನುಮಂತಪ್ಪ (32) ಮೃತಪಟ್ಟವರು. ಇನ್ನೂ ಅದೇ ಗ್ರಾಮದ ಮಹಾದೇವಪ್ಪ ಬಿ.ಎಸ್. ಗಾಯಗೊಂಡವರಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡ ಮತ್ತೊಬ್ವ ವ್ಯಕ್ತಿ ಜೊತೆ ಮಾತನಾಡುತ್ತಿದ್ದರು. ಆಗ ಯಮರೂಪಿಯಾಗಿ ಮಲೇಬೆನ್ನೂರು ಕಡೆಯಿಂದ ಬೃಹತ್ ಟ್ಯಾಂಕರ್ ಲಾರಿ ರಭಸವಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಗೆ ಹನುಮಂತಪ್ಪ ಸ್ಥಳದಲ್ಲಿಯೇ ಜೀವ ಚಲ್ಲಿದ್ದಾರೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.