ದಾವಣಗೆರೆ: ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ವಿಜಯೇಂದ್ರ ಯಡಿಯೂರಪ್ಪ ಅವರು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಇಂದು ಪದಗ್ರಹಣ ಮಾಡಿದರು. ಈ ಹಿನ್ನೆಲೆಯಲ್ಲಿ ನಗರದ ರಾಂ ಅಂಡ್ ಕೋ ಸರ್ಕಲ್ ನ ಶ್ರೀ ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಪೂಜೆ ಸಲ್ಲಿಸಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷ ಕ್ಷ ರಾಜನಹಳ್ಳಿ ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಉತ್ತರ ಯುವ ಮೋರ್ಚ ಉಪಾಧ್ಯಕ್ಷ ಹರೀಶ್ ಶಾಮನೂರು, ಟಿಂಕರ್ ಮಂಜಣ್ಣ, ಬಿ.ರಮೇಶ್ ನಾಯ್ಕ ದಕ್ಷಿಣ ಮಂಡಲದ ಅಧ್ಯಕ್ಷರಾದ ಆನಂದ್ ರಾವ್, ಸಿಂಧೆ, ಪ್ರದಾನ ಕಾರ್ಯದರ್ಶಿ ರಾಜು ನಿಲಗುಂದ ಗುರು ಸೋಗಿ, ಮಹನಗರ ಪಾಲಿಕೆ ಸದಸ್ಯರ ಸೋಗಿ ಶಾಂತಕುಮಾರ್, ಜೊಳ್ಳಿ ಗುರು, ಅಜ್ಜಂಪುರ ವಿಜಯಕುಮಾರ್, ಅಜ್ಜಂಪುರ ಮುತ್ತಣ್ಣ, ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ವಾಲಿ, ನೀತಾ ನಂದೀಶ್, ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ರಾಕೇಶ್,ಜಿಲ್ಲಾ ಯುವ ಮೊರ್ಚಾ ಪ್ರದಾನ ಕಾರ್ಯದರ್ಶಿ ಯಲ್ಲೇಶ್, ಶಶಿಧರ್, ಅತಿಥ ಅಂಬರಕರ್, ಗುರು ಕೆ.ವಿ.ಜಯಪ್ರಕಾಶ್ ಮಾಗಿ, ಶ್ರೀಕಾಂತ್ ನಿಲಗುಂದ, ಪಣಿ ಹೊಸಳ್ಳಿಮಠ, ಎಸ್ ಎಲ್ ನಾಗರಾಜ್, ಸೇರಿದಂತೆ ಅನೇಕ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.



