ದಾವಣಗೆರೆ; ಬೇತೂರು ರಸ್ತೆಯ ರಿಂಗ್ ರಸ್ತೆಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ದೂರ ಆಧರಿಸಿ ಈ ದಾಳಿ ನಡೆಸಿದ ಪೊಲೀಸರು 15,000 ಮೌಲ್ಯದ ಒಂದು ಜರ್ಸಿ ಹಸು, 12,000 ಮೌಲ್ಯದ ಎಚ್‌ಎಫ್ ತಳಿಯ ಜರ್ಸಿ ಹಸು, 14 ,000 ಮೌಲ್ಯದ ಜವಾರಿ ಹಸು, 15,000 ಮೌಲ್ಯದ ಕಂದು ಬಣ್ಣದ ಜವಾರಿ ಜಾತಿಯ ಹಸು 8,000 ಮೌಲ್ಯದ ಹೋರಿಗಾಲನ್ನು ಸಾಗಿಸಲಾಗುತ್ತಿತ್ತು. ಪೊಲೀಸರು ಹಸುಗಳನ್ನು ವಶಕ್ಕೆ ಪಡೆದಿದ್ದು, ಅಹ್ಮದ್ ನಗರದ ಚಾಲಕ ಸೈಯದ್ ವಿರುದ್ಧ ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



