ದಾವಣಗೆರೆ: ವನಿತಾ ಸಮಾಜದ ಅಂಗ ಸಂಸ್ಥೆ ವಿಮೋಚನ ವತಿಯಿಂದ ಮಹಿಳೆಯರಿಗಾಗಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ಬ್ಯೂಟಿಷಿಯನ್ ತರಬೇತಿ ನೀಡಲಾಗುವುದು.
ಸ್ಟೆಲ್ಲಾ ಗಾಯತ್ರಿ ಮತ್ತು ತಂಡದವರು ಈ ಶಿಬಿರವನ್ನು ನಡೆಸಿಕೊಡುವರು. ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವ ಮಹಿಳೆಯರು ವಿವರಕ್ಕಾಗಿ ಮೊಬೈಲ್ ಸಂಖ್ಯೆ 7760 34609ಅಥವಾ 99642 73941 ರಲ್ಲಿ ಸಂಪರ್ಕಿಸಬಹುದು.ಜೀವನದ ವಿವಿಧ ಹಂತಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ವನಿತಾ ಸಮಾಜವು ಕಿವುಡ ಮತ್ತು ವಿಶೇಷ ಚೇತನ ಹೆಣ್ಣು ಮಕ್ಕಳಿಗಾಗಿ ಸ್ಥಾಪಿಸಿರುವ ಸಿ.ಕೇಶವಮೂರ್ತಿ ವೃತ್ತಿ ತರಬೇತಿ ಕೇಂದ್ರ `ವಿಮೋಚನ’ ವತಿಯಿಂದ ಮಹಿಳೆಯರಿಗಾಗಿ ಈ ಶಿಬಿರವನ್ನು ಏರ್ಪಡಿಸಿದೆ.
ವಿಮೋಚನ ಸಂಸ್ಥೆಯು ಟೈಲರಿಂಗ್, ಬ್ಯೂಟಿಷಿಯನ್, ಕಂಪ್ಯೂಟರ್, ಕೈ ಕಸೂತಿ ಇತ್ಯಾದಿ ತರಬೇತಿಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಈಗಾಗಲೇ ಸಾಕಷ್ಟು ಹೆಣ್ಣು ಮಕ್ಕಳು ಇಂತಹ ಶಿಬಿರಗಳಲ್ಲಿ ತರಬೇತಿ ಪಡೆದು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡಿದ್ದಾರೆ ಎಂದು ವಿಮೋಚನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.



