ಡಿವಿಜಿ ಸುದ್ದಿ, ದಾವಣಗೆರೆ: ಸ್ಮಾರ್ಟ್ ಸಿಟಿಯ ಕಾಮಗಾರಿ ಕೆಲಸಗಳಿರುವುದರಿಂದ ಜ.03, 04 ರಂದು. ಬಿಟಿ ಫೀಡರ್ ಮತ್ತು ಶನೇಶ್ವರ ಫೀಡರ್‍ನ ವ್ಯಾಪ್ತಿಯಲ್ಲಿ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬಿ.ಟಿ ಫೀಡರ್ ನ ರೆಹಮಾನ್ ರಸ್ತೆ, ಮಾಗನಹಳ್ಳಿ ರೋಡ್ ಮಂಡಕ್ಕಿ ಭಟ್ಟಿ 1ನೇ ಕ್ರಾಸ್‍ನಿಂದ 10ನೇ ಕ್ರಾಸ್‍ವರೆಗೆ, ಕಾರ್ಲಮಾರ್ಕ್ಸ್ ನಗರ, ದೇವರಾಜ್ ಕ್ವಾರ್ಟಸ್(ಬೇತೂರು ರಸ್ತೆ) ದೇವೆಂದ್ರಪ್ಪ ರಸ್ತೆ, ಶಿವ ಪಾರ್ವತಿ ನಗರ, ಮೀನು ಮಾರುಕಟ್ಟೆ ಎದುರು ರಸ್ತೆ ESSAR ಪೆಟ್ರೋಲ್ ಬಂಕ್ ಹಿಂಬಾಗ, ಕೋಳಿ ಚೆನ್ನಪ್ಪ ಮಿಲ್ ಹತ್ತಿರ ಮತ್ತು ಸುತ್ತಮುತ್ತ ಪ್ರದೇಶಗಳು.
ಶನೇಶ್ವರ ಫೀಡರ್‍ನ ಜಿ.ಎಂ.ಐ.ಟಿ ಕಾಲೇಜು, ದೇವರಾಜ್ ಅರಸ್ ಬಡಾವಣೆ, ಪೂಜಾ ಹೋಟೆಲ್, ಸಾಯಿ ಹೋಟೆಲ್, ಕೋರ್ಟ್ ಸುತ್ತಮುತ್ತ, ಗಿರಿಯಪ್ಪ ಲೇಔಟ್, ಪಿಬಿ ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



