ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದ ವ್ಯಾಪ್ತಿಗೆ ಬರುವ ಹರಿಹರ ಬಸ್ ನಿಲ್ದಾಣದ ದ್ವಿ-ಚಕ್ರ ವಾಹನ ನಿಲ್ದಾಣ (ತೆರೆದ ಸ್ಥಳ 03 ವರ್ಷ) ಹಾಗೂ ಮಲೆಬೆನ್ನೂರು ಜನರಲ್ ಮಳಿಗೆ ಸಂಖ್ಯೆ-01ಕ್ಕೆ (ಶಾಶ್ವತ ಸ್ಥಳ 05 ವರ್ಷ) ಪರವಾನಗಿದಾರರನ್ನು ಆಯ್ಕೆ ಮಾಡಲು ಸಂಧಾನದ ಮೂಲಕ (ಮಾತುಕತೆಯ ಮೂಲಕ) ಅರ್ಜಿ ಆಹ್ವಾನಿಸಲಾಗಿದೆ.
ಈ ಬಗ್ಗೆ ಮಾಹಿತಿಯನ್ನು ನಿಗಮದ ವೆಬ್‌ಸೈಟ್ ksrtc.karnataka.gov.in ನಿಂದ ದಿನಾಂಕ: 01.03.2023ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ವಿಭಾಗೀಯ ಕಛೇರಿ, ಕ.ರಾ.ರ.ಸಾ.ನಿಗಮ, ದಾವಣಗೆರೆ ವಿಭಾಗ –
577002 ಇಲ್ಲಿ ಕಛೇರಿ ಅವಧಿಯಲ್ಲಿ ಸಂಪರ್ಕಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆ: ವಿಭಾಗೀಯ ಸಂಚಾರ ಅಧಿಕಾರಿಗಳು – 7760990452, ಸಹಾಯಕ
ಸಂಚಾರ ಅಧೀಕ್ಷಕರು-7022030183 ಸಂಪರ್ಕಿಸಿ.