Connect with us

Dvgsuddi Kannada | online news portal | Kannada news online

ದಾವಣಗೆರೆ:  ಅವಧಿ ಮೀರಿದ 10.89 ಲಕ್ಷ ಮೌಲ್ಯದ ಮದ್ಯ ನಾಶ ಮಾಡಿದ ಅಬಕಾರಿ ಇಲಾಖೆ

liqer

ದಾವಣಗೆರೆ

ದಾವಣಗೆರೆ:  ಅವಧಿ ಮೀರಿದ 10.89 ಲಕ್ಷ ಮೌಲ್ಯದ ಮದ್ಯ ನಾಶ ಮಾಡಿದ ಅಬಕಾರಿ ಇಲಾಖೆ

ದಾವಣಗೆರೆ: ದಾವಣಗೆರೆ ಮತ್ತು ಹರಿಹರ ಕೆಎಸ್ ಬಿಸಿಎಲ್ ಡಿಪೋಗಳಲ್ಲಿ ಮಾರಾಟವಾಗದೇ ಬಾಕಿ ಉಳಿದಿದ್ದ ಅವಧಿ ಮೀರಿದ ರೂ.10.89 ಲಕ್ಷ ಮೊತ್ತದ ಮದ್ಯ ಮತ್ತು ಬಿಯರ್‍ಯನ್ನು ನಾಶಪಡಿಸಲಾಗಿದ ಎಂದು ದಾವಣಗೆರೆ ಜಿಲ್ಲಾ ಅಬಕಾರಿ ಇಲಾಖಾ ಅಧೀಕ್ಷಕ ಬಿ.ಶಿವಪ್ರಸಾದ ಅವರು ತಿಳಿಸಿದ್ದಾರೆ.

ದಾವಣಗೆರೆ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿದ್ದ  ರೂ.1,62,113 ಮೊತ್ತದ 38.288 ಲೀಟರ್ ಮದ್ಯ ಮತ್ತು 479.160 ಲೀಟರ್ ಬಿಯರ್  ಹಾಗೂ ಹರಿಹರ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿದ್ದ ರೂ.9,26,912 ಮೊತ್ತದ 86.400 ಲೀಟರ್ ಮದ್ಯ ಮತ್ತು 3615 ಲೀಟರ್ ಬಿಯರ್ ನಾಶ ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಬಕಾರಿ ಉಪ ಆಯುಕ್ತರಾದ ರವಿ ಎಂ.ಮರಿಗೌಡ್ರ ಒಳಗೊಂಡಂತೆ ಇಲಾಖೆಯ ವಿವಿಧ ಅಧಿಕಾರಿಗಳು  ಉಪಸ್ಥಿಯಲ್ಲಿ ಜನವರಿ 18 ರಂದು  ದಾವಣಗೆರೆ ಮತ್ತು ಹರಿಹರ ಡಿಪೋದಲ್ಲಿ ದಾಸ್ತಾನು ಮಾಡಲಾಗಿದ್ದ ನಿರುಪಯುಕ್ತ 124.680 ಲೀಟರ್ ಮದ್ಯ ಹಾಗೂ 4094.160 ಬಿಯರ್ ಒಳಗೊಂಡಂತೆ ರೂ.10,89,025 ಮೊತ್ತದ ಮದ್ಯವನ್ನು ನಾಶಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top