ದಾವಣಗೆರೆ: ಶ್ರೀ ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ ಹಾಗೂ ದಾವಣಗೆರೆ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಸಹಯೋಗದಲ್ಲಿ ಜ.19 ರಂದು ಬೆಳಿಗ್ಗೆ10 ಗಂಟೆಗೆ ಹದಡಿ ರಸ್ತೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನೇಕಾರ ಸಮುದಾಯಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಶ್ರೀ ಮುದನೂರು ಸಂಸ್ಥಾನ ಮಠ ಟ್ರಸ್ಟ್ ನ ಅಧ್ಯಕ್ಷ ಡಾ. ಈಶ್ವರಾನಂದ ಸ್ವಾಮೀಜಿ, ಸಮಾಜದ ಅಧ್ಯಕ್ಷ ಆರ್.ಹೆಚ್. ನಾಗಭೂಷಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಹಾಗೂ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಉದ್ಘಾಟನೆ ನೆರವೇರಿಸಲಿದ್ದಾರೆ. ಉದ್ಯಮಿ ಡಾ. ಎಂ.ಜಿ. ಮಂಜುನಾಥ್ ಪುಸ್ತಕ ಬಿಡುಗಡೆ ಮಾಡಲಿದ್ದು, ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ. ಬಸವರಾಜ್ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ.
ಸಮ್ಮಿಲನದ ಸಾನ್ನಿಧ್ಯವನ್ನು ಹೇಮಕೂಟದ ಶ್ರೀ ದಯಾನಂದ ಸ್ವಾಮೀಜಿ, ಗುಳೇದಗುಡ್ಡ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ತುಮ್ಮಿನಕಟ್ಟೆ ಶ್ರೀ ಪ್ರಭುಲಿಂಗ ಸ್ವಾಮಿ, ತಾಪಸಿ ಹಳ್ಳಿ ದಿವ್ಯ ಜ್ಞಾನಾಂದಗಿರಿ ಸ್ವಾಮಿ, ಬೆಟಗೇರಿ ಶ್ರೀ ನೀಲಕಂಠ ಸ್ವಾಮಿ, ಹಳೇ ಹುಬ್ಬಳ್ಳಿ ಶ್ರೀ ಶಿವಶಂಕರ ಸ್ವಾಮೀಜಿ, ಅಕ್ಕಲ ಕೋಟೆ ಶ್ರೀ ಚಿಕ್ಕ ರೇವಣಸಿದ್ದ ಸ್ವಾಮಿ, ನೀರಲಕೆರೆ ಶ್ರೀ ನಾಗಲಿಂಗ ಸ್ವಾಮಿ ಹಾಗೂ ಕೊಡೇಕಲ್ ಮಠದ ವೃಷಭೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಒಕ್ಕೂಟದ ಗೌರವಾಧ್ಯಕ್ಷ ಕೆ.ಸಿ. ಕೊಂಡಯ್ಯ, ರಾಜ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್, ಮಾಜಿ ಸಚಿವರಾದ ಎಂ. ಮಲ್ಲಿಕಾರ್ಜುನ ನಾಗಪ್ಪ, ಉಮಾಶ್ರೀ, ಮಲ್ಲಿಕಾರ್ಜುನ ಬನ್ನಿಯವರು, ಡಾ. ಬಸವರಾಜ್ ಕೇಲಗಾರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕರ ಎಂ. ಬುಚಡಿ ಹಾಗೂ ಕಾವೇರಿ ಹ್ಯಾಂಡ್ ಲೂಮ್ಸ್ ಅಧಕ್ಷ ಬಿ.ಜೆ. ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಂಗಮೇಶ್ ಉಪಾಸೆ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ರಾಮಸ್ವಾಮಿ, ಶ್ರೀನಿವಾಸ ಇಂಡಿ,ಪಾಲಾಕ್ಷಪ್ಪ,ಧರ್ಮರಾಜ್ ಏಕಬೋಟೆ,ಬಸವರಾಜ್ ಗುಬ್ಬಿ,ಪರಶುರಾಮ್,ರಾಮಚಂದ್ರಪ್ಪ,ಪಿ.ಜೆ ನಾಗರಾಜ್ ಇದ್ದರು.



