ದಾವಣಗೆರೆ: ಕೃಷಿ ಇಲಾಖೆಯ 2021-22ನೇ ಸಾಲಿನ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆಯಲ್ಲಿ ಜಿಲ್ಲೆಗೆ ನಾಲ್ಕು ಪ್ರಶಸ್ತಿ ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯಿಂದ 10 ರೈತರು ಭಾಗವಹಿಸಿದ್ದು, ನಾಲ್ವರಿಗೆ ಪ್ರಶಸ್ತಿಗೆ ಲಭಿಸಿದೆ.
ಅಂತರ ಬೆಳೆಯಾಗಿ ತೊಗರಿ ಬೆಳೆ ಸ್ಪರ್ಧೆಯಲ್ಲಿ ಚನ್ನಗಿರಿಯ ಮಾದಾಪುರ ಗ್ರಾಮದ ರೈತ ವಿರೂಪಾಕ್ಷಪ್ಪ ಪ್ರಥಮ ಸ್ಥಾನ, ಚನ್ನಗಿರಿಯ ನೀತಿಗೆರೆ ಗ್ರಾಮದ ವೀರಾಚಾರಿ ದ್ವಿತೀಯ ಸ್ಥಾನ ಮತ್ತು ಹರಿಹರದ ರಾಮತೀರ್ಥ ಗ್ರಾಮದ ಸೋಮಪ್ಪ ಎಸ್.ಎನ್. ತೃತೀಯ ಸ್ಥಾನ ಪಡೆದಿದ್ದಾರೆ.
ರಾಜ್ಯಮಟ್ಟದ ಮುಸುಕಿನ ಜೋಳ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆಯಡಿ ಚನ್ನಗಿರಿ ತಾಲ್ಲೂಕಿನ ಮುದಿಗೆರೆ ಗ್ರಾಮದ ರೈತ ರುದ್ರಪ್ಪ ಅವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದ್ದಾರೆ.



