ದಾವಣಗೆರೆ: ಭೀಕರ ಕಾರು ಅಪಘಾತದಲ್ಲಿ ತನ್ನನ್ನು ತಾನು ರಕ್ಷಣೆ ಜತೆ ತಂದೆ-ತಾಯಿಯನ್ನೂ ರಕ್ಷಸಿದ ಮಾಡಿದ ಕೀರ್ತಿ ವಿವೇಕ್ ಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.
ನವದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್‌ಫೇರ್ ನೀಡುವ 2022ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಎನ್.ಎನ್.ಕೆ.ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ಕೀರ್ತಿ ವಿವೇಕ್ ಸಾಹುಕಾರ್ ಆಯ್ಕೆಯಾದ ವಿದ್ಯಾರ್ಥಿ. ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ವಿದ್ಯಾರ್ಥಿ ಜಗಳೂರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಮಂಜುನಾಥ್ ಸಾಹುಕಾರ್, ಶ್ರುತಿ ದಂಪತಿ ಪುತ್ರನಾಗಿದ್ದಾನೆ.
ಇತ್ತೀಚೆಗೆ ಕೀರ್ತಿ ತನ್ನ ಕುಟುಂಬದೊಂದಿಗೆ ಜಗಳೂರಿನ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕಾರು ಅಪಘಾತವಾಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿತ್ತು. ಸಣ್ಣಪುಟ್ಟ ಗಾಯಗೊಂಡಿದ್ದ ಕೀರ್ತಿ ಕಾರ್‌ನಿಂದ ಹೊರಬಂದು, ತೀವ್ರವಾಗಿ ಗಾಯಗೊಂಡಿದ್ದ ತಂದೆ ಹಾಗೂ ತಾಯಿ ರಕ್ಷಣೆ ಮಾಡಿ ಪೊಲೀಸರಿಗೂ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದನು. ಅಪಘಾತದ ಸಮಯದಲ್ಲಿ ಬಾಲಕ ತೋರಿದ ಧೈರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆ ಈಗಾಗಲೇ ನವೆಂಬರ್ 1ರಂದು 2022-23ನೇ ಸಾಲಿನ ‘ಹೊಯ್ಸಳ ಶೌರ್ಯ ಪ್ರಶಸ್ತಿ’ ನೀಡಿ ನೀಡಿತ್ತು. ಇದೀಗ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.



