ದಾವಣಗೆರೆ: ದಾವಣಗೆರೆ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಟ್ರಸ್ಟ್ ಗೌರವಾಧ್ಯಕ್ಷರು, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ಟವರು ತಮ್ಮ ಬೇಡಿಕೆಯಂತೆ ತುಲಾಭಾರವನ್ನು ಸಮರ್ಪಿಸಿದರು.
92 ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಶಾಮನೂರು ಶಿವಶಂಕರಪ್ಪನವರು ಹಲವು ದೇವಸ್ಥಾನ, ಮಠ-ಮಂದಿರಗಳಿಗೆ ಹಲವು ರೀತಿಯಲ್ಲಿ ತನು-ಮನದಿಂದ ದಾನ ಮಾಡುತ್ತಾ ಬಂದಿದ್ದಾರೆ. ಇಂದು ನಗರ ದೇವತೆಗೆ ತಮಗೆ ತುಲಾಭಾರ ನೆರವೇರಿಸಿಕೊಂಡು ತುಲಾಭಾರದ ವಸ್ತುಗಳನ್ನು ದೇವಸ್ಥಾನಕ್ಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶಿವಶಂಕರಪ್ಪ ಸೊಸೆಯಂದಿರಾದ ಪ್ರೀತಿ ಬಕ್ಕೇಶ್, ಪ್ರಭಾ ಮಲ್ಲಿಕಾರ್ಜುನ್, ಮೊಮ್ಮಗ ಶಿವ ಉಪಸ್ಥಿತರಿದ್ದು, ತುಲಾಭಾರ ನೆರವೇರಿಸಲು ನೆರವಾದರು.ಟ್ರಸ್ಟಿಗಳಾದ ಗೌಡ್ರು ಚನ್ನಬಸಪ್ಪ, ಜೆ.ಕೆ.ಕೊಟ್ರಬಸಪ್ಪ, ಹೆಚ್.ಬಿ.ಗೊಣೇಪ್ಪ, ಉಮೇಶ್ ರಾವ್ ಸಾಳಂಕಿ, ಸೊಪ್ಪಿನ ಗುರುರಾಜ್, ಪಿಸಾಳೆ ಸತ್ಯನಾರಾಯಣರಾವ್, ರಾಮಚಂದ್ರಪ್ಪ ಪಟೇಲ್, ಗುಡ್ಡಣ್ಣರ ಶಿವಶಂಕರಪ್ಪ, ಮುಖಂಡರಾದ ಜಿ.ಸಿ.ನಿಂಗಪ್ಪ ಹದಡಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಇಟ್ಟಿಗುಡಿ ಮಂಜುನಾಥ್, ಪ್ರವೀಣ್, ವೆಂಕಟೇಶ್‍ನಾಯ್ಕ, ಕವಿರಾಜ್ ಮತ್ತಿತರರಿದ್ದರು.



