ದಾವಣಗೆರೆ: ಅವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 600ಕ್ಕೂ ಹೆಚ್ಚು ಹಸು ಮತ್ತು ಕರುಗಳನ್ನು ಸಾಕಲಾಗುತ್ತಿದ್ದು, ರೈತ ಬಾಂಧವರು ತಮ್ಮ ಕೈಲಾದಷ್ಟು ಮೇವು (ಹುಲ್ಲು) ದಾನ ಮಾಡುವುದರ ಮೂಲಕ ಸಾರ್ಥಕ ಸೇವೆ ಸಲ್ಲಿಸುವಂತೆ ವಿನಂತಿಸಲಾಗಿದೆ.
ಪ್ರಾಣಿ ದಯಾ ಜ್ಞಾನ ಪ್ರಸಾರಕ ಸಂಘದಿಂದ ನಡೆಯುತ್ತಿರುವ ಈ ಗೋಶಾಲೆಗೆ ಈಗಾಗಲೇ ಅನೇಕ ಜನರು, ರೈತರು ಮೇವನ್ನು ದಾನ ಮಾಡುತ್ತಿದ್ದಾರೆ. ದಾನಿಗಳು ಗೋಶಾಲೆಗೆ ಹುಲ್ಲನ್ನು ನೀಡುವುದರೊಂದಿಗೆ ಹಸು ಮತ್ತು ಕರುಗಳ ರಕ್ಷಣೆಗೆ ಸಹಕರಿಸುವಂತೆ ಗೋಶಾಲೆಯ ಜಿತೇಂದ್ರ ಜೈನ್ (94485 16033) ಮತ್ತು ದಿನೇಶ್ ಜೈನ್ (99803 39333) ಕೋರಿದ್ದಾರೆ.



