ದಾವಣಗೆರೆ: ಮಂಗಳೂರು ಕೆಮಿಕಲ್ಸ್ & ಫರ್ಟಿಲೈಸರ್ಸ್ ಲಿಮಿಟೆಡ್ ಸಂಸ್ಥೆಯ ಸಿ ಯಸ್ ಆರ್ ಅಡಿಯಲ್ಲಿ ಶೀಘ್ರದಲ್ಲಿ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗಾಗಿ ಮೂಲ ಕೃಷಿ ಶಿಕ್ಷಣವನ್ನು ಪ್ರಾರಂಭಿಸಲಾಗುತ್ತಿದೆ.
ಗ್ರಾಮೀಣ ಕೃಷಿ ಸಮುದಾಯದಿಂದ ಬಂದಿರುವ ಯುವ ಶಾಲಾ ಪ್ರತಿಭೆಯನ್ನ ಆಧುನಿಕ ಕೃಷಿಯ ಬಗ್ಗೆ ತಿಳಿದುಕೊಳ್ಳಲು ಉತ್ತೇಜಿಸುವುದು ಹಾಗು ತರಬೇತಿ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ದಾವಣಗೆರೆ ಜಿಲ್ಲೆಯ 5 ಗ್ರಾಮಗಳಾದ ಕಾಡಜ್ಜಿ, ಆಲೂರು, ಎಲೆಬೇತೂರು, ಜಮ್ಮಾಪುರ ಹಾಗು ತೋರಣಗಟ್ಟಿ ಗ್ರಾಮದ ಆಸಕ್ತಿವುಳ್ಳ ವಿದ್ಯಾರ್ಥಿಗಳಿಗೆ ನಡೆಸಲಾಗುವುದು.
ಈ ಕೃಷಿ ಅಭಿವೃದ್ಧಿ ಕಾರ್ಯಕ್ರಮವನ್ನು ದಿನಾಂಕ 19.11.2022 ರ ಶನಿವಾರದಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ DATC ಕಾಡಜ್ಜಿ ಪ್ರಾರಂಭಿಸಲಾಗುತ್ತಿದೆ. ರೈತ ಭಾಂದವರು, ಮಂಗಳ ಸಂಸ್ಥೆಯ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ನಿಮ್ಮ ಯುವ ಕೃಷಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ಕೋರಲಾಗಿದೆ.



