ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗ ಗ್ರಾಮದಲ್ಲಿ ರೈತರ ಬೆನ್ನೆಲುಬಾಗಿರುವ ದನಕರುಗಳಿಗೆ ಬಂದಿರುವ ಚರ್ಮ ಗಂಟು ರೋಗದಿಂದ ಮುಕ್ತಿಗೊಳಿಸಲು ಗ್ರಾಮದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಅಜ್ಜಿ ಅಮ್ಮ ಹಬ್ಬ ಆಚರಿಸಲಾಯಿತು.
ಮನೆಯಲ್ಲಿ ಪೂಜೆ ಮಾಡಿ ಹೋಳಿಗೆ ಎಡೆ, ಬೇವಿನ ಸೊಪ್ಪು, ತೆಂಗಿನಕಾಯಿ, ಬಾಳೆಹಣ್ಣು ಇಟ್ಟು ಪೂಜೆ ಸಲ್ಲಿಸಲಾಯಿತು. ದನಕರುಗಳಿಗೆ ಕಾಡುತ್ತಿರುವ ಚರ್ಮ ಗಂಟು ಕಾಯಿಲೆಯಿಂದ ರಕ್ಷಿಸು ಎಂದು ಬೇಡಿಕೊಂಡು ಪಾದಗಟ್ಟೆಯಿಂದ ಗ್ರಾಮದ ಹೊರಗೆ ಕಳುಹಿಸಿ ಗ್ರಾಮಸ್ಥರು ಅಜ್ಜಿ ಹಬ್ಬವನ್ನು ಆಚರಿಸಿದರು.



