ವಿಶಾಖಪಟ್ಟಣಂ: ಮೊದಲ ಏಕ ದಿನ ಪಂದ್ಯದಲ್ಲಿ ಸೋತು ನಿರಾಸೆ ಮೂಡಿಸಿದ್ದ ಟೀಮ್ ಇಂಡಿಯಾ, ಇವತ್ತು ಬ್ಯಾಟಿಂಗ್ ಮೂಲಕ 388 ರನ್ ಗಳ ಬೃಹತ್ ಮೊತ್ತ ಸೇರಿಸಿ ನಿರಾಸೆ ಮರೆಸಿತು.
ಆರಂಭಿಕ ಆಟಗಾರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ದ್ವಿಶತಕದ ಜೊತೆಯಾಟ ಕೊನೆಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸಿಗೆ 388 ರನ್‍ಗಳ ಕಠಿಣ ಗುರಿಯನ್ನು ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ವಿಂಡೀಸ್ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿದೆ.
WATCH: Rohit Sharma’s stroke-filled 159
Full video here – https://t.co/L1hFmMR18n #INDvWI pic.twitter.com/VoX5SFhBSi
— BCCI (@BCCI) December 18, 2019
ರೋಹಿತ್ ಶರ್ಮಾ 159 ರನ್(138 ಎಸೆತ, 17 ಬೌಂಡರಿ, 5 ಸಿಕ್ಸರ್), ರಾಹುಲ್ 102 ರನ್(104 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಶ್ರೇಯಸ್ ಅಯ್ಯರ್ 53 ರನ್( 32 ಎಸೆತ, 3 ಬೌಂಡರಿ, 4 ಸಿಕ್ಸರ್), ರಿಷಬ್ ಪಂತ್ 39 ರನ್(16 ಎಸೆತ, 3 ಬೌಂಡರಿ, 4 ಸಿಕ್ಸರ್) ಗಳ ಸ್ಟೋಟಕ ಬ್ಯಾಟಿಂಗ್ ನಿಂದ ಬೃಹತ್ ಮೊತ್ತ ಪೇರಿಸಿತು.
Innings Break!
An absolute run fest here in Visakhapatnam as #TeamIndia post a mammoth total of 387/5 on the board, courtesy batting fireworks by Rohit (159), Rahul (102), Shreyas (53), Rishabh (39).#INDvWI pic.twitter.com/rDgLwizYH4
— BCCI (@BCCI) December 18, 2019



