ದಾವಣಗೆರೆ: ದಾವಣಗೆರೆಯ ಧನುಷ್, ಛಾಣಸ್ಯ ವಾಲ್ ಗೋಡೆ ಏರುವ ( ವಾಲ್ ಕ್ಲೈಂಬಿಂಗ್ ) ಸ್ಫರ್ಧೆಯಲ್ಲಿ ಏಷ್ಯನ್ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಾಲ್ ಕ್ಲೈಂಬಿಂಗ್‌ನ ತರಬೇತುದಾರ ಪಿ.ಎಲ್.ಕೆ. ಅಶ್ಮತ್ ಉಲ್ಲಾ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು,ಉತ್ತರಕಾಶಿಯಲ್ಲಿ ಈಚೆಗೆ ಮುಕ್ತಾಯಗೊಂಡ 26ನೇ ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲೈಂಬಿಂಗ್‌ನಲ್ಲಿ 13 ವರ್ಷದೊಳಗಿನ ವಿಭಾಗದಲ್ಲಿ ಧನುಷ್ 2 ನಿಮಿಷ ಹಾಗೂ ಛಾಣಸ್ಯ 2.30 ನಿಮಿಷಗಳಲ್ಲಿ 50 ಅಡಿಯ ಗೋಡೆ ಏರುವ ಮೂಲಕ ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಛಾಣಸ್ಯ ಎಸ್.ವಿ.ಎಸ್ ಕಾನ್ವೆಂಟ್‌ನ ವಿದ್ಯಾರ್ಥಿನಿ, ಧನುಷ್ ತರಳಬಾಳು ಶಾಲೆಯ ವಿದ್ಯಾರ್ಥಿ. ದಾವಣಗೆರೆಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ದಾವಣಗೆರೆಯಿಂದ 8 ಕ್ರೀಡಾಪಟುಗಳು ಭಾಗವಹಿಸಿದ್ದು, ದಕ್ಷಿಣ ವಲಯದಲ್ಲಿ ದಾವಣಗೆರೆಗೆ ಪಾರಿತೋಷಕ ದೊರೆತಿದೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಎರಡೂವರೆ ತಿಂಗಳ ತರಬೇತಿ ನೀಡಲಾಗಿತ್ತು ಎಂದು ತಿಳಿಸಿದರು.