ಡಿವಿಜಿ ಸುದ್ದಿ, ದಾವಣಗೆರೆ: ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಕಾರ್ತಿಕೋತ್ಸವ ಸಮಿತಿಯಿಂದ ಡಿ. 16 ರಂದು ಸೋಮವಾರ ಸಂಜೆ 6.30ಕ್ಕೆ ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗೆ ಕಾರ್ತಿಕೋತ್ಸ ನಡೆಯಲಿದೆ.
ಇದೇ ಸಂದರ್ಭದಲ್ಲಿ ದಾವಣಗೆರೆ ನಗರದ ತರಳಬಾಳು ಬಡಾವಣೆಯ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸ್ವಾಮಿಯ ಶಿಲಾಮೂರ್ತಿಗೆ ಅಭಿಷೇಕ ಹಾಗೂ ನಂದಾ ದೀಪವನ್ನು ಸರ್ವ ಭಕ್ತರು ಬೆಳಗಿಸುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು. ಇದೇ ವೇಳೆ ವಿಶ್ವಬಂಧು ಶ್ರೀ ಮರುಳಸಿದ್ಧರ ಜೀವನಾದರ್ಶ ಕುರಿತು ಡಾ. ನಾ. ಲೋಕೇಶ್ ಒಡೆಯರ್ ಉಪನ್ಯಾಸ ನೀಡಲಿದ್ದಾರೆ.
ಕದಳಿ ಮಹಿಳಾ ತಂಡ ಅನುಭವ ಮಂಟಪ ದಾವಣಗೆರೆ ಹಾಗೂ ಶ್ರೀಮತಿ ರುದ್ರಾಕ್ಷಿಬಾಯಿ ಮತ್ತು ವೃಂದದವರು ದಾವಣಗೆರೆ ಇವರಿಂದ ಸಂಗೀತ ಸೌರಭ ಜರುಗಲಿದೆ.



