ದಾವಣಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕ್ವಿಟ್ ಇಂಡಿಯಾ ಚಳವಳಿ ನೆನಪಿಗಾಗಿ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ಯೋಧ ರುಗಳನ್ನು ಅವರ ಮನೆಗಳಿಗೆ ತೆರಳಿ ಸನ್ಮಾನಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹಾಗೂ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಭೇಟಿ ನೀಡಿ, ಶಾಲು, ಹಾರ ಹಾಗೂ ಫಲ ನೀಡಿ ಗೌರವಿಸಲಾಯಿತು. ಹೋರಾಟದ ದಿನಗಳನ್ನು ಮೆಲುಕು ಹಾಕಲಾಯಿತು.
ಈ ಸಂದರ್ಭದಲ್ಲಿ ಮೇಯರ್ ಜಯಮ್ಮ ಗೋಪಿನಾಯ್ಕ,ಮಾಜಿ ಮೇಯರ್ ಎಸ್.ಟಿ.ವೀರೇಶ್,ಸನ್ಮಾನಿತರ ಕುಟುಂಬ ವರ್ಗದವರು ಇದ್ದರು. ಸನ್ಮಾನಕ್ಕೆ ಭಾಜನರಾದವರು ಮರುಳ ಸಿದ್ದಪ್ಪ ಬಿನ್ ಸಿದ್ದಪ್ಪ. ಕುಂಬಾರ ಪೇಟೆ, ದಾವಣಗೆರೆ ,ಬಿ.ಹಾಲಪ್ಪ. ಕುಂಬಾರ ಪೇಟೆ ದಾವಣಗೆರೆ ,ಬಿ.ಎಂ.ಶಿವಲಿಂಗ ಸ್ವಾಮಿ. ವಿದ್ಯಾನಗರ ದಾವಣಗೆರೆ., ಟಿ.ಎನ್.ಸಿದ್ದರಾಮಪ್ಪ.ಎಸ್.ಎಸ್.ಬಡಾವಣೆ, ದಾವಣಗೆರೆ ತಿಪ್ಪೇಸ್ವಾಮಿ ಬಿನ್ ಕರಿಸಿದ್ದಪ್ಪ ತರಳಬಾಳು ಬಡಾವಣೆ, ನೀಲಪ್ಪ ಬಿನ್ ಮಲ್ಲಪ್ಪ, ಶಾಂತ ವೀರಯ್ಯ ಬಿನ್ ಮುರುಗಯ್ಯ, ಚನ್ನಬಸಪ್ಪ ಇದ್ದರು.



