ಚನ್ನಗಿರಿ: ಕನ್ನಡಿಗರ ನಾಡಗುಡಿಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಷಿಯವರು ವಿಶ್ವದಾದ್ಯಂತ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ,ಹೊರರಾಜ್ಯ,ಹೊರದೇಶ ಹಾಗೂ ಕೇಂದ್ರಡಾಳಿತ ಪ್ರದೇಶಗಳಲ್ಲಿ ಕಸಾಪ ಘಟಕಗಳನ್ನು ಸ್ಥಾಪಿಸುವ ದೃಷ್ಟಿಯಿಂದ ಒಂದು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಿದ್ದಾರೆ.ಇದಕ್ಕೆ ಪೂರಕವಾಗಿ ಚನ್ನಗಿರಿ ತಾಲ್ಲೂಕಿನಲ್ಲಿಯೂ ಹೆಚ್ಚು ಸದಸ್ಯತ್ವದ ಗುರಿಯನ್ನು ಹೊಂದಲಾಗಿದೆ ಎಂದು ಚನ್ನಗಿರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್ ಕರೆ ನೀಡಿದ್ದಾರೆ.
ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಕಸಾಪ ಅಳವಡಿಸಿಕೊಂಡಿದ್ದು,ಹೊಸದಾಗಿ ಸದಸ್ಯರಾಗಲು , ಹಾಲಿ ಸದಸ್ಯರ ವಿಳಾಸವನ್ನು ಪರಿಷ್ಕರಿಸಲು,ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ಸೇರಿದಂತೆ ಪರಿಷತ್ತಿನ ಎಲ್ಲ ಕಾರ್ಯಚಟುವಟಿಕೆಗಳನ್ನು ಗಮನಿಸಲು ತಂತ್ರಜ್ಞಾನಾಧಾರಿತವಾದ ಆಧುನಿಕ ಮೊಬೈಲ್ ಆ್ಯಪ್ನ್ನು ಈಗಾಗಲೇ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳಿಸಲಾಗಿದೆ. ಈ ಆ್ಯಪ್ನ್ನು ತಮ್ಮ ಮೊಬೈಲಿನಲ್ಲಿ ಅನುಸ್ಥಾಪಿಸಲು https://play.google.com/store/apps/details?id=com.knobly.kasapa ಈ ಕೊಂಡಿಯನ್ನು ಬಳಸಬಹುದು. ಹಾಗೂ ಹೊಸದಾಗಿ ಕಸಾಪ ಸದಸ್ಯರಾಗ ಬಯಸುವವರು https://kannadasahithyaparishattu.in/app ಈ ಲಿಂಕನ್ನು ಬಳಸಿ ಸದಸ್ಯತ್ವವನ್ನು ಪಡೆದು ಕನ್ನಡ ಭಾಷೆಯ ಹಿರಿಮೆ, ಗರಿಮೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕರಿಸಬೇಕಾಗಿ ಕೋರಿದ್ದಾರೆ.



