ದಾವಣಗೆರೆ: 220 ಕೆ. ವಿ ಸ್ವೀಕರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ ಈ ಕೆಳಕಂಡ ಫೀಡರ್ ಗಳ ವ್ಯಾಪ್ತಿಯಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜುಲೈ 15 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-10 ಸರಸ್ವತಿ:ಸರಸ್ವತಿ ಬಡಾವಣೆ ಎ, ಬಿ & ಸಿ ಬ್ಲಾಕ್, ಜೀವನ್ ಭೀಮಾನಗರ, ಚಿಕ್ಕಮಣಿ ದೇವರಾಜ್‍ಅರಸ್ ಬಡಾವಣೆ, ಜಯನಗರ ಎ & ಬಿ ಬ್ಲಾಕ್ , ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಸಾಯಿ ಬಾಬ ದೇವಸ್ಥಾನದ ಸುತ್ತಮುತ್ತ, ಲಕ್ಷ್ಮೀ ಬಡಾವಣೆ ಹಾಗೂ ಸುತ್ತಮತ್ತಲಿನ ಪ್ರದೇಶಗಳು.
ಎಫ್-11 ವಾಟರ್ ವಕ್ರ್ಸ:“ದೂರದರ್ಶನ ಕೇಂದ್ರ, ಮಹಾನಗರ ಪಾಲಿಕೆ ನೀರು ಸರಬರಾಜು ಘಟಕಗಳು, ಸಕ್ರ್ಯೂಟ್ ಹೌಸ್, ಭೂಸೇನಾ ನಿಗಮ, ಜಿಲ್ಲಾ ಪಂಚಾಯತ್ ಕಚೇರಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಎಫ್-13 ಇಂಡಸ್ಟ್ರಿಯಲ್: ಇಂಡಸ್ಟ್ರಿಯಲ್ ಏರಿಯಾ ಲೋಕಿಕೆರೆ ರಸ್ತೆ, ಸುಬ್ರಹ್ಮಣ್ಯನಗರ, ಎಸ್.ಎ. ರವೀಂದ್ರನಾಥ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಎಫ್-14 ವಿದ್ಯಾನಗರ : ಶಿವಕುಮಾರಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ, ಹದಡಿ ರಸ್ತೆ, ಸೇಂಟ್‍ಜಾನ್ ಸ್ಕೂಲ್, ಐ.ಟಿ.ಐ. ಕಾಲೇಜು, ರಿಂಗ್‍ರಸ್ತೆ, ಶ್ರೀನಿವಾಸನಗರ, ತರಳಬಾಳು ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಎಫ್-15 ರಂಗನಾಥ : ಯುಬಿಡಿಟಿ ಲೇಡಿಸ್ ಹಾಸ್ಟೆಲ್, ಜಮುನಾ ವಾಣಿಜ್ಯ ಮಳಿಗೆ,ಸವಿತಾ ಹೋಟೆಲ್, ವಿದ್ಯಾನಗರ, ತರಳಬಾಳು ಬಡಾವಣೆ, ಗಾಂಧಿ ಮೂರ್ತಿ ವೃತ್ತದಿಂದ ಈಶ್ವರ ಪಾರ್ವತಿ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಎಫ್-22 ಎಸ್‍ಎಸ್ ಹೈಟೆಕ್: ಎಸ್.ಓ.ಜಿ ಕಾಲೋನಿ ಎ, ಬಿ & ಸಿ ಬ್ಲಾಕ್, ಬುದ್ದ, ಬಸವ, ಭೀಮ ನಗರ , ಕರ್ನಾಟಕ ಬೀಜ ನಿಗಮ ಘಟಕ ಹಾಗೂ ಸುತ್ತಮತ್ತಲಿನ ಪ್ರದೇಶಗಳು. ಎಫ್-23 ವಿವೇಕಾನಂದ : ಸ್ವಾಮಿ ವಿವೇಕಾನಂದ ಬಡಾವಣೆ, ಎಲ್.ಐ.ಸಿ ಕಾಲೋನಿ, ಆಂಜನೇಯ ಬಡಾವಣೆ, ವಿನಾಯಕ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ದಾವಣಗೆರೆ ತಾಲ್ಲೂಕಿನ 66/11 ಕೆ.ವಿ ಓಬಜ್ಜಿಹಳ್ಳಿ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತಾಗಿ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ಜುಲೈ 15 ರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಮಾರ್ಗದಲ್ಲಿ ಬರುವ ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ ಕ್ಯಾಂಪ್, ಅರಸಾಪುರ, ಬದನಾಯಕರ ತಾಂಡ, ಕಡ್ಲೇಬಾಳು, ಹಳೇ ಕಡ್ಲೇಬಾಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-2 ಎಮ್.ಸಿ.ಸಿ.ಬಿ ಫೀಡರ್‍ನಲ್ಲ್ಲಿ24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜುಲೈ 15 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಂ.ಸಿ.ಸಿ.ಬಿ ಎಫ್.2 ಫೀಡರ್ ಎಸ್.ಎಸ್ ಲೇಔಟ್ ಎ.ಬ್ಲಾಕ್, ಕುವೆಂಪು ನಗರ, ಸಿದ್ದವೀರಪ್ಪ ಬಡಾವಣೆ, ಗ್ಲಾಸ್ ಹೌಸ್ ಏರಿಯಾ, ಲಕ್ಷ್ಮೀ ಪ್ಲೊರ್ ಮಿಲ್, ಶಾಮನೂರು ರಸ್ತೆ, ಬಿಐಇಟಿ ಕಾಲೇಜ್, ಎಸ್‍ಎಸ್ ಮಾಲ್, ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.