ದಾವಣಗೆರೆ: ದಾವಣಗೆರೆ ಜಿಲ್ಲಾ ಒಕ್ಕಲಿಗರ ಸಂಘದಿಂದ ಜುಲೈ 24 ರ ಭಾನುವಾರ ಒಕ್ಕಲಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ.
2022ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದವರು ಜುಲೈ15 ರೊಳಗೆ ಅಂಕಪಟ್ಟಿ ಇನ್ನಿತರ ದಾಖಲೆಗಳೊಂದಿಗೆ ಶಾಂತವೇರಿ ಗೋಪಾಲಗೌಡ ವೃತ್ತ (ವಿದ್ಯಾರ್ಥಿ ಭವನ ವೃತ್ತ) ದಲ್ಲಿರುವ ಜಿಲ್ಲಾ ಒಕ್ಕಲಿಗರ ಸಂಘದ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಜುಲೈ 24 ರಂದು ಸರ್ಕಾರಿ ಬಸ್ ನಿಲ್ದಾಣ ಪಕ್ಕ ಇರುವ ಸಾಯಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ವಿ.ಎನ್. ಅಶೋಕ್, ಪ್ರಧಾನ ಕಾರ್ಯದರ್ಶಿ ಹನುಮೇಗೌಡ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಅಶೋಕ್: ಮೊ.ನಂ 9448443197 ಅಥವಾ ಹನುಮೇಗೌಡ ಮೊ.ನಂ. 9611100333 ಇವರನ್ನು ಸಂಪರ್ಕಿಸಬಹುದು.



