ಡಿವಿಜಿ ಸುದ್ದಿ,ಹರಿಹರ: ಹರಿಹರದ ವೀರಶೈವ ಪಂಚಮಸಾಲಿ ಸಮಾಜದ ‘ಹರ ಜಾತ್ರಾ ಮಹೋತ್ಸವ’ ಮತ್ತು ರಾಜ್ಯ ಪಂಚಮಸಾಲಿ ಸಂಘದ ‘ಬೆಳ್ಳಿ ಬೆಡಗು’ ಹಬ್ಬಕ್ಕೆ ಬರುವಂತೆ ಪೀಠಾಧ್ಯಕ್ಷ ಶ್ರೀ ವಚನನಾಂದ ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದರು.
ಗುರುವಾರ ನವದೆಹಲಿಯಲ್ಲಿ ಪ್ರಧಾನಿ ಕಚೇರಿಯಲ್ಲಿ ಭೇಟಿಯಾದ ಶ್ರೀಗಳು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಶ್ರೀಗಳು ಕಚೇರಿಗೆ ಬರುವ ವಿಷಯ ತಿಳಿದು ಪ್ರಧಾನಿ ಮೋದಿ ಸ್ವಾಗತಿಸಿದರು. ಈ ವೇಳೆ ಶ್ರೀಗಳ ಯೋಗಾಸನ ಪ್ರಚಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹರ ಜಾತ್ರಾ ಮಹೋತ್ಸವಕ್ಕೆ ಬರುವ ಬಗ್ಗೆ ತಿಳಿಸುವುದಾಗಿ ಹೇಳಿದರು.
ಜನವರಿ 13, 14 ರಂದು ಹರಿಹರದ ಹರ ಪೀಠದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ,ಸಂಸದ ಜಿ.ಎಂ.ಸಿದ್ಧೇಶರವರು, ಮುರುಗೇಶ ನಿರಾಣಿ, ಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ ಹಾಗೂ ರಾಜ್ಯ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಿ.ನಾಗನಗೌಡರು ಉಪಸ್ಥಿತರಿದ್ದರು.