ದಾವಣಗೆರೆ: ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 28-ಭಗತ್‍ಸಿಂಗ್ ನಗರ ಮತ್ತು 37-ಕೆ.ಇ.ಬಿ ಕಾಲೋನಿಯಲ್ಲಿ ಉಪ ಚುನಾವಣೆಯ ಮಸ್ಟರಿಂಗ್ ಡಿ ಮಸ್ಟರಿಂಗ್ ಕಾರ್ಯ ಹಾಗೂ ಎಣಿಕಾ ಕಾರ್ಯವನ್ನು ಸರ್ಕಾರಿ ಬಾಲಕರ ಫ್ರೌಢಶಾಲೆ, ಹೈಸ್ಕೂಲ್ ಮೈದಾನದಿಂದ ಪಕ್ಕದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಬದಲಾಯಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸಹಕಾರ ನೀಡುವಂತೆ ಪಾಲಿಕೆಯ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



