ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಜಿಲ್ಲೆಯ ಹರಿಹರಕ್ಕೆ ಉದ್ಯೋಗ ಮೇಳ ಉದ್ಘಾಟಿಸಲು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಕಲಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದ ಶಾಸಕ ರೇಣುಕಾಚಾರ್ಯ, ವಾಗೀಶ್ಸ್ವಾಮಿಭಾಗವಹಿಸಿದ್ರೆ ಬಹುಜನ ಸಮಾಜ ಪಾರ್ಟಿಯಿಂದ (ಬಿಎಸ್ ಪಿ) ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಹೆಚ್.ಮಲ್ಲೇಶ್ ಎಚ್ಚರಿಕೆ ನೀಡಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡ ಜಂಗಮ ಪ್ರಮಾಣ ಪತ್ರ ಪಡೆದು ದಲಿತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ರೇಣುಕಾಚಾರ್ಯ ಮತ್ತು ವಾಗೀಶ್ಸ್ವಾಮಿ ಪಾಲ್ಗೊಂಡರೆ ಬಿಎಸ್ ಪಿ ಜಿಲ್ಲಾ ಘಟಕ ಪ್ರಬಲವಾಗಿ ವಿರೋಧಿಸುತ್ತದೆ. ಜಿಲ್ಲೆಯಲ್ಲಿ ಕೆಲವು ರಾಜಕಾರಣಿಗಳು ಪೋಲೀಸ್ ಇಲಾಖೆಯ ಮೇಲೆ ಒತ್ತಡ ತಂದು ದಲಿತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿಸುತ್ತಿದ್ದಾರೆ. ದಲಿತರು ಹಾಗೂ ದಲಿತ ಸಂಘಟನೆಗಳ ಹೋರಾಟಗಾರರ ಮೇಲೆ ಸುಳ್ಳು ಕೇಸುಗಳನ್ನು ಹಾಕಿಸುತ್ತಿದ್ದಾರೆ ಎಂದರು ದೂರಿದರು.
ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸ್ ಬಲ ತೋರಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವಂತಹ ಸಮಾಜ ಕಲ್ಯಾಣ ಇಲಾಖೆ , ಕಾರ್ಮಿಕ ಇಲಾಖೆ , ನಿರ್ಮಿತ ಕೇಂದ್ರ , ಲ್ಯಾಂಡ್ ಆರ್ಮಿ , ಕೊಳಚೆ ನಿರ್ಮೂಲನ ಮಂಡಳಿ , ಡಾ.ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಗಳಲ್ಲಿ ದಲಿತರಿಗೆ ದೊರಕ ಬೇಕಾದಂತಹ ಯಾವುದೇ ಸೌಲಭ್ಯಗಳು ದೊರಕದೆ ವಂಚಿತರಾಗಿರುತ್ತಾರೆ.ಕಳಪೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ ಮಾತನಾಡಿ, ಹರಿಹರಕ್ಕೆ ತುಂಗಾರತಿಗೆ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಅವರನ್ನು ಬಹುಜನ ಸಮಾಜಪಾರ್ಟಿ ಜಿಲ್ಲಾ ಸಮಿತಿಯಿಂದ ಹರಿಹರ ಬಜೆಟ್ನಲ್ಲಿ ತಾಲ್ಲೂಕು ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಆಗ್ರಹಿಸಿದ್ದೆವು . ಆದರೆ, ಇದುವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಎಲ್.ಶಿವು, ಎಸ್.ಸಮೀವುಲ್ಲಾ ಇದ್ದರು.