Dvgsuddi Kannada | online news portal | Kannada news onlineDvgsuddi Kannada | online news portal | Kannada news online
  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ
Font ResizerAa
Font ResizerAa
Dvgsuddi Kannada | online news portal | Kannada news onlineDvgsuddi Kannada | online news portal | Kannada news online
  • Home
  • ಪ್ರಮುಖ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More

Search

Menu

  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ
Subscribe

More from BuzzVibe

  • Blog
  • Contact
  • Contact Us
  • Customize Interests
  • Kannada News
  • My Bookmarks
  • Privacy Policy

Latest Stories

astrology today
ಸೋಮವಾರದ ರಾಶಿ ಭವಿಷ್ಯ 12 ಜನವರಿ 2026
maize 22
ಹೊನ್ನಾಳಿ ಎಪಿಎಂಸಿಯಲ್ಲಿ ನಾಳೆಯಿಂದ ಮೆಕ್ಕೆಜೋಳ ಖರೀದಿ ಶುರು; 2,150 ರೂ. ದರ ನಿಗದಿ
Chandrasekhar
ದಾವಣಗೆರೆ: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಪತ್ತೆ
davangere traffic police
ದಾವಣಗೆರೆ: ಮಕ್ಕಳಿಂದ ಗುಲಾಬಿ ಹೂ ನೀಡಿ ಸಂಚಾರಿ ನಿಯಮ ಬಗ್ಗೆ ವಿಶೇಷ ಜಾಗೃತಿ
davangere crime news
ದಾವಣಗೆರೆ: ಶಾಲಾ, ಕಾಲೇಜು ಬಳಿ ಗುಟ್ಕಾ,ತಂಬಾಕು ಮಾರಾಟ ಮಾಡುತ್ತಿದ್ದ ಶಾಪ್ ಮೇಲೆ ದಾಳಿ

Socials

ದಾವಣಗೆರೆ

ಹಣ, ಅಧಿಕಾರಕ್ಕಿಂತ ಜ್ಞಾನ ಮುಖ್ಯ : ಮಹಾಂತೇಶ ಬೀಳಗಿ

Dvgsuddi
By
Dvgsuddi
ByDvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
Follow:
Last updated: November 29, 2019
Share
3 Min Read
SHARE

ಡಿವಿಜಿ, ಸುದ್ದಿ, ದಾವಣಗೆರೆ: ಹಣ, ಅಧಿಕಾರಕ್ಕಿಂತ ಜ್ಞಾನ ಮುಖ್ಯ. ಜ್ಞಾನದ ಬೆನ್ನು ಹತ್ತಿದರೆ ಎಲ್ಲವನ್ನೂ ಪಡೆಯಬಹುದು. ಯಶಸ್ಸಿನ ಉನ್ನತಿಯನ್ನು ತಲುಪಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಶುಕ್ರವಾರ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

dv vv 2

ಜ್ಞಾನವೆಂದರೆ ಪರೀಕ್ಷೆಗಾಗಿ ಓದುವ ಅಭ್ಯಾಸವಲ್ಲ. ಬದುಕನ್ನು ರೂಪಿಸುವ ಅನುಭವ, ಅರಿವು. ಈ ಜ್ಞಾನಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಜ್ಞಾನ ಒಂದಿದ್ದರೆ ಜಗತ್ತಿನಲ್ಲಿ ಏನೆಲ್ಲವನ್ನೂ ಸಾಧನೆ ಮಾಡಬಹುದು. ಈ ಸಾಧನೆಗೆ ಛಲ, ಪರಿಶ್ರಮ, ನಿರ್ದಿಷ್ಟ ಗುರಿ ಅನಿವಾರ್ಯ ಎಂದು ನುಡಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವೂ ಅನಿವಾರ್ಯ. ಓದಿದ್ದನ್ನು ಅರ್ಥ ಮಾಡಿಕೊಂಡು ಬರೆಯುವ ಕೌಶಲ್ಯ ರೂಢಿಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಸರಳವಾಗಿ, ಸ್ಪಷ್ಟವಾಗಿ ವಿವರಿಸುವ, ವಿಶ್ಲೇಷಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಬರವಣಿಗೆ ಕೌಶಲ್ಯ ಕರಗತ ಮಾಡಿಕೊಂಡರೆ ಯಾವುದೇ ಪರೀಕ್ಷೆಯನ್ನೂ ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

Related News

astrology today
ಸೋಮವಾರದ ರಾಶಿ ಭವಿಷ್ಯ 12 ಜನವರಿ 2026
January 11, 2026
maize 22
ಹೊನ್ನಾಳಿ ಎಪಿಎಂಸಿಯಲ್ಲಿ ನಾಳೆಯಿಂದ ಮೆಕ್ಕೆಜೋಳ ಖರೀದಿ ಶುರು; 2,150 ರೂ. ದರ ನಿಗದಿ
January 11, 2026
Chandrasekhar
ದಾವಣಗೆರೆ: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಪತ್ತೆ
January 11, 2026

ಸ್ಪರ್ಧಾತ್ಮಕ ಪರೀಕ್ಷೆ ಹೆಸರಿನಲ್ಲಿ ನಾಯಿ ಕೊಡೆಯಂತೆ ಹುಟ್ಟಿಕೊಂಡಿರುವ ತರಬೇತಿ ಕೇಂದ್ರಗಳು ವ್ಯವಹಾರದ ಕೇಂದ್ರಗಳಾಗಿವೆ. ಅವುಗಳ ಮೂಲಕ ವಿದ್ಯಾರ್ಥಿಗಳ ಸುಲಿಗೆ ನಡೆಯುತ್ತಿದೆ.ಇದನ್ನು ತಪ್ಪಿಸಿ ಬಡವರು, ದುರ್ಬಲರಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆ ಲಭಿಸಬೇಕು ಎಂಬ ಉದ್ದೇಶದಿಂದದಾವಣಗೆರೆ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಯೋಜನಾಬದ್ಧ ಅಧ್ಯಯನ ಅನಿವಾರ್ಯ. ನಿಗದಿತ ಕಾಲದಲ್ಲಿ ನಿರ್ದಿಷ್ಟ ಸಾಧನೆ ಮಾಡುವ ಗುರಿ ಇಟ್ಟುಕೊಳ್ಳಬೇಕು. ಯಾವುದೇ ಅಡ್ಡಿ, ಆತಂಕ, ನಿಂದನೆ ಎದುರಾದರೂ ಹಮ್ಮು, ಬಿಗುಮಾನ ಬಿಟ್ಟು ಕಲಿಯುವ ಆಸಕ್ತಿಯತ್ತ, ಗುರಿ ಸಾಧನೆಯತ್ತ ಗಮನ ಇರಬೇಕು. ಹಿರಿಯರ ಮಾರ್ಗದರ್ಶನವೂ ಅಗತ್ಯ. ಗೆಲ್ಲುª ತುಡಿತದಿಂದ ಅಧ್ಯಯನ ಮಾಡಬೇಕು. ಹಾಗಾದಾಗ ಮಾತ್ರ ಯಶಸ್ಸಿನ ಗುರಿ ತಲುಪಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Related News

davangere traffic police
ದಾವಣಗೆರೆ: ಮಕ್ಕಳಿಂದ ಗುಲಾಬಿ ಹೂ ನೀಡಿ ಸಂಚಾರಿ ನಿಯಮ ಬಗ್ಗೆ ವಿಶೇಷ ಜಾಗೃತಿ
January 11, 2026
davangere crime news
ದಾವಣಗೆರೆ: ಶಾಲಾ, ಕಾಲೇಜು ಬಳಿ ಗುಟ್ಕಾ,ತಂಬಾಕು ಮಾರಾಟ ಮಾಡುತ್ತಿದ್ದ ಶಾಪ್ ಮೇಲೆ ದಾಳಿ
January 11, 2026
death
ದಾವಣಗೆರೆ: ಟಿಸಿ ಬಳಿ ಬಿದ್ದಿದ್ದ ಕಸ ತೆಗೆಯುವಾಗ ವಿದ್ಯುತ್ ಸ್ಪರ್ಶ ; ವ್ಯಕ್ತಿ ಸಾವು
January 10, 2026

ಸಾಧನೆಗೆ, ಸಿದ್ಧಿಗೆ ಬಡತನ ಎಂದಿಗೂ ಅಡ್ಡಿ ಬರುವುದಿಲ್ಲ. ಬಡತನವನ್ನೇ ಮೆಟ್ಟಿಲು ಮಾಡಿಕೊಳ್ಳಬೇಕು. ಯುಪಿಎಸ್‍ಸಿ, ಕೆಪಿಎಸ್‍ಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳು ಸಾಧನೆಯ ದೃಷ್ಟಿಯಿಂದ ನಿಜವಾದ ಪರೀಕ್ಷೆಗಳು. ಅವುಗಳಲ್ಲಿ ಯಶಸ್ಸು ಪಡೆಯುವುದು ಕಷ್ಟ ಸಾಧ್ಯವಾದರೂ, ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಪರೀಕ್ಷೆಗಳು ಹಾಗೆ, ಹೀಗೆ ಎನ್ನುವ ಕಟ್ಟು ಕತೆಗಳನ್ನು ಬಿಟ್ಟು ಶ್ರದ್ಧೆಯಿಂದ ಅಭ್ಯಾಸ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಸಾಧಕರಿಂದ ಸ್ಪೂರ್ತಿಯನ್ನೂ ಪಡೆಯಬೇಕು ಎಂದು ಸಲಹೆ ನೀಡಿದರು.

ಪರೀಕ್ಷಾ ಪೂರ್ವಸಿದ್ಧತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಮನಸ್ಸು ಮತ್ತು ಹೃದಯವನ್ನು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಮೀಸಲಿಡಬೇಕು. ಹಲವು ವಿಭಿನ್ನ ಸ್ಪರ್ಧೆಗಳನ್ನು ಎದುರಿಸುವ ಬದಲಾಗಿ ಒಂದೇ ಉದ್ದೇಶಿತ ಗುರಿಯೊಂದಿಗೆ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಬೇಕು. ಅಲ್ಲದೆ ಸಾಧಿಸುವ ಕಿಚ್ಚು ಮನಸ್ಸಿನಲ್ಲಿದ್ದರೆ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.

dv vv 3

ಪರೀಕ್ಷೆಗೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆಗೆ ಅಗತ್ಯವಿರುವ ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನವೂ ಮುಖ್ಯ. ಪ್ರತಿದಿನವೂ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪದವಿಯ ಸಾಧನೆಗಿಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳು ಮುಖ್ಯ. ಸಕಾಲಿಕ ತರಬೇತಿ, ಮಾರ್ಗದರ್ಶನದೊಂದಿಗೆ ಪರೀಕ್ಷೆ ಎದುರಿಸಲು ಸಜ್ಜಾಗಬೇಕು ಎಂದರು.

Related News

dvg Congress
ದಾವಣಗೆರೆ ದಕ್ಷಿಣ ಉಪಚುನಾವಣೆ; ಈ ಬಾರಿ ಕಾಂಗ್ರೆಸ್ ಟಿಕೆಟ್ ಅಹಿಂದ ವರ್ಗಕ್ಕೇ ನೀಡಬೇಕು ; ಒಂದು ವೇಳೆ ಕೊಡದಿದ್ರೆ..!!! ಎಚ್ಚರಿಕೆ ಸಂದೇಶ‌ ಕೊಟ್ಟ ನಾಯಕರು…
January 10, 2026
davangerd Police Public school 1
ದಾವಣಗೆರೆ: ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ
January 10, 2026
e chalen 1
ದಾವಣಗೆರೆ: ಇನ್ಮುಂದೆ ಮನೆಯಿಂದಲೇ ಆನ್ ಲೈನ್ ಮೂಲಕ ಟ್ರಾಫಿಕ್ ಇ-ಚಲನ್‌ ಪಾವತಿಸಲು ಅವಕಾಶ
January 10, 2026

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ. ಹಲಸೆ ಮಾತನಾಡಿ, ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಅದಕ್ಕಾಗಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬ ಎರಡು ವರ್ಷಗಳ ಹಿಂದಿನ ಕನಸು ಇದೀಗ ನನಸಾಗಿದೆ. ಇಲ್ಲಿಯ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ಹಲವು ವಿಷಯಗಳಲ್ಲಿ ಪರಿಣತಿ ಪಡೆದಿದ್ದಾರೆ. ಅವರ ಮಾರ್ಗದರ್ಶನ, ತರಬೇತಿಯೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮತ್ತು ಸ್ಪರ್ಧೆ ಎದುರಿಸಲು ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಲಸಚಿವ ಪ್ರೊ.ಬಸವರಾಜ ಬಣಕಾರ, ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಬೇತಿ ಕೇಂದ್ರ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಯಶಸ್ಸು ಸಾಧಿಸಿದರೆ ತಮ್ಮ ಪ್ರಯತ್ನ ಸಾರ್ಥಕವಾಗಲಿದೆ ಎಂದು ನುಡಿದರು.

ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ.ಅಡವಿರಾವ್, ಸಿಂಡಿಕೇಟ್ ಸದಸ್ಯರಾದ ಜಯಪ್ರಕಾಶ್ ಕೊಂಡಜ್ಜಿ, ಶಶಿಧರ್ ಬಿ.ಎನ್. ಪ್ರೊ.ಯು.ಎಸ್. ಮಹಾಬಳೇಶ್ವರ, ಡಾ.ಈಶ್ವರಪ್ಪ, ಡಾ.ರವಿ ಪಾಟೀಲ, ಡಾ. ಪ್ರಸನ್ನಕುಮಾರ್, ಡಾ.ಶಿವಕುಮಾರ ಕಣಸೋಗಿ, ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ಉಪಸ್ಥಿತರಿದ್ದರು.

TAGGED:#newscamps competativedavagere vvfeatured
Share This Article
Facebook Bluesky Copy Link Print
ByDvgsuddi
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Previous Article ಆರ್ .ರಾಘವೇಂದ್ರಗೆ ಪಿಎಚ್ ಡಿ ಪದವಿ
Next Article ಶನಿವಾರದ ರಾಶಿ ಭವಿಷ್ಯ
Leave a Comment

Leave a Reply Cancel reply

Your email address will not be published. Required fields are marked *

ಮಿಸ್ ಮಾಡ್ದೆ ಓದಿ

ಮೂರು ಡಿಸಿಎಂಗೆ ಹೈಕಮಾಂಡ್ ಒಲವು?

ಕೆಎಂಎಫ್ ಅಧ್ಯಕ್ಷಗಿರಿ ಬಾಲಚಂದ್ರ ಜಾರಕಿಹೊಳಿ ಪಾಲು ?

ಪಶು ಚಿಕಿತ್ಸಾಲಯ ಕಟ್ಟಡ ಗುದ್ದಲಿ ಪೂಜೆ

ನಾಳೆ ನೂತನ ಸಚಿವರಿಗೆ ಖಾತೆ ಹಂಚಿಕೆ‌

ಪಿ.ವಿ. ಸಿಂಧೂ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ ನೀನೇನೆ..

Categories

Dvgsuddi
dvgsuddi
Dvgsuddi Kannada | online news portal | Kannada news online

DvgSuddi

  • Home
  • ಪ್ರಮುಖ ಸುದ್ದಿ
    • ರಾಷ್ಟ್ರ ಸುದ್ದಿ
    • ರಾಜ್ಯ ಸುದ್ದಿ
  • ಜ್ಯೋತಿಷ್ಯ
  • ರಾಜಕೀಯ
  • ಕ್ರೈಂ ಸುದ್ದಿ
  • More
    • ಚನ್ನಗಿರಿ
    • ಹರಿಹರ
    • ದಾವಣಗೆರೆ

Subscribe Newsletter

Subscribe to our newsletter to get our newest articles instantly!