ಡಿವಿಜಿ ಸುದ್ದಿ, ಹಿರೇಕೆರೂರು: ವಿಶ್ವಾಸ, ನಂಬಿಕೆ ದ್ರೋಹ ಮಾಡಿ ಹೋಗಿ. ಅಧಿಕಾರ, ದುಡ್ಡಿನ ಆಸೆಗೆ ಪಕ್ಷಾಂತರ ಮಾಡಿದ ಬಿ.ಸಿ. ಪಾಟೀಲ್ ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಎಂದು ವಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ವೇಳೆ ಮಾತನಾಡಿದ ಅವರು, ರಟ್ಟೀಹಳ್ಳಿ ತಾಲೂಕು, ಸರ್ವಜ್ಞ ಪ್ರಾಧಿಕಾರ ಮಾಡಿದವನು ನಾನು. ನಾನು ಸಿಎಂ ಆಗಿದ್ದಾಗ ಈ ಪಾಟೀಲ ಸೋತಿದ್ದ. ಎಂಎಲ್ಎ ಆಗಿರ್ಲಿಲ್ಲ. ತಾಲ್ಲೂಕಿನ ಜನರ ಅಭಿಮಾನದಿಂದ ನಾನು ದುಡ್ಡು ಕೊಟ್ಟಿದ್ದೇನೆ. ದುಡ್ಡು ಕೊಟ್ಟಿದ್ದು ನಾನು, ಯಡಿಯೂರಪ್ಪ ಕೊಟ್ಟಿದ್ದು ಅಂತಾ ಸುಳ್ಳು ಹೇಳ್ತಾನೆ. ನನ್ನನ್ನು ಇಂದ್ರ, ಚಂದ್ರ, ಮಹಾನ್ ನಾಯಕ ಅಂತಾ ಬಿ.ಸಿ.ಪಾಟೀಲ ಹೇಳಿದ್ದ. ಈಗ ನನ್ನನ್ನ ಟೀಕೆ ಮಾಡಲು ನಾಚಿಕೆ ಆಗಲ್ವಾ.?
ಹದಿನೇಳು ಜನ ಶಾಸಕರು ಬಿಜೆಪಿಯವರ ಒತ್ತಾಯದ ಮೇರೆಗೆ ಪಕ್ಷಾಂತರ ಮಾಡಿದ್ದಾರೆ. ಬಿ.ಸಿ.ಪಾಟೀಲರನ್ನ ಕ್ಷೇತ್ರದ ಮತದಾರರು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ರಿ. ರಟ್ಟೀಹಳ್ಳಿಗೆ ನಾನು ಬಂದು ಪಾಟೀಲರನ್ನ ಗೆಲ್ಲಿಸಿ ಅನ್ನದಿದ್ರೆ ಪಾಟೀಲ ಎಂಎಲ್ ಎ ಆಗ್ತಿರ್ಲಿಲ್ಲ. ಆಶೀರ್ವಾದ ಮಾಡಿದವರ ಅನುಮತಿ ಪಡೆಯದೇ ಪಕ್ಷಾಂತರ ಮಾಡಿದೆ ಎಂದರು.



