ಬೆಂಗಳೂರು: ಹಿಜಾಬ್ ವಿವಾದದಲ್ಲಿ ‘ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂದು ಕೂಗಿದ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಗೆ ಉಗ್ರ ಸಂಘಟನೆ ಅಲ್ಖೈದಾ ಶಹಬ್ಬಾಸ್ ಗಿರಿ ನೀಡಿದದೆ.
ಅಲ್ಖೈದಾ ಮುಖ್ಯಸ್ಥ ಆಲ್ ಜವಾಹಿರಿ ಈ ಬಗ್ಗೆ 9 ನಿಮಿಷದ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದು, ಮುಸ್ಕಾನ್ ಭಾರತದ ಉದಾತ್ತ ಮಹಿಳೆ. ಅವಳ ಹೋರಾಟ ನನಗೆ ಸಂತಸ ತಂದಿದೆ. ಹಿಜಾಬ್ ದಬ್ಬಾಳಿಕೆ ವಿರುದ್ಧ ಭಾರತದ ಮುಸ್ಲಿಮರು ತಿರುಗಿ ಬೀಳಬೇಕು. ಮುಸ್ಕಾನ್ ಹೋರಾಟ ನನಗೆ ಸಂತಸ ತಂದಿದೆ. ಹಿಜಾಬ್ ಹಾಕುವುದು ನಮ್ಮ ಧರ್ಮದ ಹಕ್ಕು ಎಂದು ಬಣ್ಣಿಸಿ ಒಂದು ಪದ್ಯ ಬರೆಯುತ್ತೇನೆ ಎಂದು ಹೇಳಿಕೊಂಡಿದ್ದಾನೆ.
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಳು. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್ ವಿವಾದದ ಹಿಂದೆ ಉಗ್ರರ ಕೈವಾಡ ಇದೆ. ಈ ಬಗ್ಗೆ ನಾನು ಹಿಂದೆಯೇ ಹೇಳಿದ್ದೆ, ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ ಎಂದಿದ್ದಾರೆ.



