ಮುಧೋಳ: ಸಾಮಾನ್ಯವಾಗಿ ಒಂದು ಟ್ರ್ಯಾಕ್ಟರ್ ನಲ್ಲಿ 10ರಿಂದ 20 ಟನ್ ಕಬ್ಬು ಲೋಡ್ ಮಾಡೋದನ್ನು ನೋಡಿದ್ದೇನೆ. ಆದರೆ, ಇಲ್ಲೊಬ್ಬ ರೈತ ತಮ್ಮ ಸ್ವಂತ ಟ್ರ್ಯಾಕ್ಟರ್ ನಲ್ಲಿ ಬರೋಬ್ಬರಿ 53.79 ಟನ್ ಕಬ್ಬು ಲೋಡ್ ಮಾಡಿ ದಾಖಲೆ ಬರೆದಿದ್ದಾನೆ.
ಜಮಖಂಡಿ ತಾಲ್ಲೂಕು ನಾವಲಗಿ ಗ್ರಾಮದ ಪ್ರಗತಿಪರ ರೈತ ಬಸಪ್ಪ ಸದಪ್ಪ ಮುಗಳಖೋಡ ತಮ್ಮ ಜಮೀನಿನಲ್ಲಿ ಬೆಳೆದ 53.79 ಟನ್ ಕಬ್ಬನ್ನು ತಮ್ಮದೇ ಟ್ರ್ಯಾಕ್ಟರ್ ನಲ್ಲಿ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಗೆ ಸಾಗಿಸಿ ದಾಖಲೆ ಮಾಡಿದ್ದಾನೆ.ನಿರಾಣಿ ಸಕ್ಕರೆ ಕಾರ್ಖಾನೆಯವರು ಪ್ರಗತಿಪರ ರೈತ ಬಸಪ್ಪ ಅವರನ್ನು ಸನ್ಮಾನಿದ್ದಾರೆ. 53.79 ಟನ್ ಕಬ್ಬು ಸಾಗಿಸಿರುವುದು ದಾಖಲೆಯಾಗಿದೆ.