ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕಿನ ತೌವಡೂರು ಗ್ರಾಮದ ರೈತ ಡಿ.ಕೆ.ಭೀರಪ್ಪ ಎಂಬುವರ ಕುರಿಯು ವಿಚಿತ್ರವಾದ ಕುರಿಮರಿಗೆ ಜನ್ಮ ನೀಡಿದೆ. ಸಂಜೆ ಸಮಯದಲ್ಲಿ ಕುರಿಯು ಮರಿ ಹಾಕಿದ್ದು, 2 ತಲೆ, 4 ಕಾಲು, 4 ಕಣ್ಣು, 2 ಬಾಲ, ಒಂದೇ ದೇಹವಿದೆ.
ಈ ಕುರಿ ಮರಿಯು ಜನನವಾದ ಕೆಲವೇ ನಿಮಿಷಗಳಲ್ಲಿ ಮಂಗಳವಾರ ಸಂಜೆ 7ಗಂಟೆಗೆ ಸಾವನ್ನಪ್ಪಿದೆ. ಕುರಿಮರಿಯನ್ನು ನೋಡಲು ಇಡೀ ಗ್ರಾಮದ ಜನರು ನೆರೆದಿದ್ದು, ಮರಿ ನೋಡಿದ ಜನ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.