ದಾವಣಗೆರೆ: ಸರ್ಕಾರದ ಆದೇಶದಂತೆ ಅತ್ಯುನ್ನತ ಸೇವೆಗೈದ ಅಥವಾ ಸಾಧನೆಗೈದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ನೀಡುವ 2021-22ನೇ ಸಾಲಿನ ಜಿಲ್ಲಾ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ಯನ್ನು ಜಿಲ್ಲೆಯಲ್ಲಿನ ಅಧಿಕಾರಿಗಳು ಮತ್ತು ನೌಕರರಿಗೆ ಏ.21 ರಂದು ಜರುಗುವ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಂದು ನೀಡಲು ಉದ್ದೇಶಿಸಲಾಗಿದ್ದು, ಪ್ರಶಸ್ತಿಗಾಗಿ ಅರ್ಹ ಅಧಿಕಾರಿ, ನೌಕರರಿಗೆ ಸಂಬಂಧಿಸಿದಂತೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.
ಇಲಾಖೆಗಳ ಅರ್ಹ ಅಧಿಕಾರಿಗಳು ಮತ್ತು ನೌಕರರು ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ನಾಮ ನಿರ್ದೇಶನಗಳನ್ನು ನೋಡಲ್ ಅಧಿಕಾರಿಯಾಗಿರುವ ದಾವಣಗೆರೆ ಉಪವಿಭಾಗಾಧಿಕಾರಿಗಳಿಗೆ ಏ.04 ರೊಳಗಾಗಿ ಸಲ್ಲಿಸಬಹುದು. ಸಾರ್ವಜನಿಕರು ಕೂಡ ಸರ್ಕಾರಿ ನೌಕರರ ಪರವಾಗಿ ನಾಮನಿರ್ದೇಶನಗಳನ್ನು ಸಲ್ಲಿಸಬಹುದಾಗಿದೆ.
ರಾಜ್ಯ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ಗಾಗಿ ನಾಮ ನಿರ್ದೇಶನಗಳನ್ನು ಸಹ ಏ.04 ರೊಳಗಾಗಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಯವರ ಕಛೇರಿಯನ್ನು ಸಂಪರ್ಕಿಸಬಹುದುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



