ಹರಿಹರ: ಗ್ರಾಮದೇವತೆಗೆ ಬಲಿ ನೀಡಲು ಬಿಟ್ಟಿದ್ದ ಕೋಣವನ್ನು ಪೊಲೀಸರು ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ. ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದನ್ನು ಹೈಕೋರ್ಟ್ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಬಸವರಾಜ್ ನಾಯ್ಕ್ ನೇತೃತ್ವದಲ್ಲಿ ಬಲಿ ಕೋಣ ಪತ್ತೆ ಮಾಡಿ ಸೆರೆಹಿಡಿದು ಹರಿಹರ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಕಟ್ಟಿ ಹಾಕಿದ್ದಾರೆ.
ಯಾವ ದೇವರು ಪ್ರಾಣಿ ಬಲಿ ಬೇಡುವುದಿಲ್ಲ. ಇದು ಮೂಢನಂಬಿಕೆ. ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ಮಾದರಿಯಲ್ಲಿ ಕೋಣದ ದೇಹದಿಂದ ಅಲ್ಪ ರಕ್ತ ಪಡೆದು ಹಬ್ಬದಾಚರಣೆ ಮಾಡಲು ಅವಕಾಶವಿದೆ. ಪ್ರಾಣಿಗಳನ್ನು ಧರ್ಮದ ಹೆಸರಲ್ಲಿ ಕ ಕೊಲ್ಲಬೇಡಿ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿಪಿಐ ಸತೀಶ್‌ಕುಮಾರ್ ಯು., ಪಿಎಸ್‌ಐ ಸುನೀಲ್ ಕುಮಾರ್ ತೇಲಿ, ಸಾರ್ವಜನಿಕರು ಇದ್ದರು.



