ದಾವಣಗೆರೆ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಬರುವ ವಿಶ್ವಕರ್ಮ, ಉಪ್ಪಾರ, ಅಂಬಿಗ, ಆರ್ಯವೈಶ್ಯ, ಮಡಿವಾಳ, ಅಲೆಮಾರಿ ಸವಿತಾ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ವಿವಿಧ ಯೋಜನೆಗಳಿಗಾಗಿ 2021-22 ನೇ ಸಾಲಿಗೆ ಒಟ್ಟು 1645 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 1128 ಅರ್ಜಿಗಳು ಅಂಗೀಕೃತಗೊಂಡಿದ್ದು, 517 ಅರ್ಜಿಗಳು ವಿವಿಧ ಕಾರಣಗಳಿಗಾಗಿ ತಿರಸ್ಕೃತಗೊಂಡಿವೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಫಲಾಪೇಕ್ಷಿಗಳಿಗೆ ನಿಗಮದಿಂದ ಸ್ವಯಂ ಉದ್ಯೋಗ ಸಾಲ ಯೋಜನೆ, ಸಾಂಪ್ರದಾಯಿಕ ಕುಶಲಕರ್ಮಿ ಸಾಲ ಯೋಜನೆ, ಕಿರುಸಾಲ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 2021-22ನೇ ಸಾಲಿಗೆ ಸಾಲ ಸೌಲಭ್ಯ ಕೋರಿ ಒಟ್ಟು 1645 ಜನ ಅರ್ಜಿ ಸಲ್ಲಿಸಿದ್ದಾರೆ.
ಅಲೆಮಾರಿ ಅರೆ ಅಲೆಮಾರಿ ನಿಗಮದಡಿ ಚೈತನ್ಯ ಸ್ವಯಂ ಉದ್ಯೋಗ ಯೋಜನೆಗೆ ಒಟ್ಟು 460 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 267 ಅರ್ಜಿಗಳು ಅಂಗೀಕೃತಗೊಂಡಿದ್ದು, ವಿವಿಧ ಕಾರಣಗಳಿಗೆ 193 ಅರ್ಜಿಗಳು ತಿರಸ್ಕøತವಾಗಿವೆ. ಕಿರುಸಾಲ ಯೋಜನೆಗೆ ಒಟ್ಟು 15 ಅರ್ಜಿ ಸಲ್ಲಿಕೆಯಾಗಿದ್ದು, ಎಲ್ಲ 15 ಅಂಗೀಕೃತವಾಗಿವೆ. ಗಂಗಾ ಕಲ್ಯಾಣ ಯೋಜನೆಗೆ ಒಟ್ಟು 48 ಅರ್ಜಿಗಳು ಸಲ್ಲಿಕೆಯಾಗಿದ್ದು, 25 ಅರ್ಜಿ ಅಂಗೀಕೃತಗೊಂಡು, 23 ಅರ್ಜಿ ತಿರಸ್ಕೃತವಾಗಿವೆ. ಅಂಬಿಗ ಅಭಿವೃದ್ಧಿ ನಿಗಮದಡಿ ಕೀರುಸಾಲ ಯೋಜನೆಗೆ ಒಟ್ಟು 10 ಅರ್ಜಿ ಸಲ್ಲಿಕೆಯಾಗಿದ್ದು, ಎಲ್ಲ 10 ಅರ್ಜಿಗಳು ಅಂಗೀಕೃತವಾಗಿವೆ.
ವಿಶ್ವಕರ್ಮ ಅಭಿವೃದ್ಧಿ ನಿಗಮದಡಿ ಚೈತನ್ಯ ಸ್ವಯಂ ಉದ್ಯೋಗ ಯೋಜನೆಗೆ ಒಟ್ಟು 220 ಅರ್ಜಿಗಳು ಸಲ್ಲಿಕೆಯಾಗಿದ್ದು, 123 ಅಂಗೀಕೃತಗೊಂಡು, 97 ತಿರಸ್ಕೃತವಾಗಿವೆ. ಕಿರುಸಾಲ ಯೋಜನೆಗೆ ಸಲ್ಲಿಕೆಯಾದ ಎಲ್ಲ 08 ಅರ್ಜಿಗಳು ತಿರಸ್ಕೃತವಾಗಿವೆ, ಗಂಗಾ ಕಲ್ಯಾಣ ಯೋಜನೆಗೆ ಒಟ್ಟು 10 ಅರ್ಜಿಗಳು ಸಲ್ಲಿಕೆಯಾಗಿದ್ದು, 03 ಅಂಗೀಕೃತಗೊಂಡು, 07 ಅರ್ಜಿಗಳು ತಿರಸ್ಕೃತವಾಗಿವೆ.
ಮಡಿವಾಳ ಅಭಿವೃದ್ಧಿ ನಿಗಮದಡಿ ಚೈತನ್ಯ ಸ್ವಯಂ ಉದ್ಯೋಗ ಯೋಜನೆಗೆ ಒಟ್ಟು 107 ಅರ್ಜಿಗಳು ಸಲ್ಲಿಕೆಯಾಗಿದ್ದು, 97 ಅಂಗೀಕೃತಗೊಂಡು, 10 ಅರ್ಜಿ ತಿರಸ್ಕøತವಾಗಿವೆ. ಸಾಂಪ್ರದಾಯಿಕ ಕುಶಲಕರ್ಮಿ ಸಾಲ ಯೋಜನೆಗೆ ಒಟ್ಟು 253 ಅರ್ಜಿಗಳು ಸಲ್ಲಿಕೆಯಾಗಿದ್ದು, 197 ಅಂಗೀಕೃತಗೊಂಡು, 56 ಅರ್ಜಿಗಳು ತಿರಸ್ಕøತವಾಗಿವೆ. ಕಿರುಸಾಲ ಯೋಜನೆಗೆ ಒಟ್ಟು 50 ಅರ್ಜಿ ಸಲ್ಲಿಕೆಯಾಗಿದ್ದು, 20 ಅಂಗೀಕೃತಗೊಂಡಿದ್ದರೆ, 30 ಅರ್ಜಿಗಳು ತಿರಸ್ಕೃತವಾಗಿವೆ.
ಸವಿತಾ ಸಮಾಜ ಅಭಿವೃದ್ಧಿ ನಿಗಮದಡಿ ಚೈತನ್ಯ ಸ್ವಯಂ ಉದ್ಯೋಗ ಯೋಜನೆಗೆ ಒಟ್ಟು 31 ಅರ್ಜಿಗಳು ಸಲ್ಲಿಕೆಯಾಗಿದ್ದು, 23 ಅಂಗೀಕೃತಗೊಂಡು, 08 ತಿರಸ್ಕೃತವಾಗಿವೆ. ಸಾಂಪ್ರದಾಯಿಕ ಕುಶಲಕರ್ಮಿ ಸಾಲ ಯೋಜನೆಗೆ ಒಟ್ಟು 74 ಅರ್ಜಿಗಳು ಸಲ್ಲಿಕೆಯಾಗಿದ್ದು, 63 ಅಂಗೀಕೃತಗೊಂಡು, 11 ತಿರಸ್ಕøತವಾಗಿವೆ.ಉಪ್ಪಾರ ಅಭಿವೃದ್ಧಿ ನಿಗಮದಡಿ ಚೈತನ್ಯ ಸ್ವಯಂ ಉದ್ಯೋಗ ಯೋಜನೆಗೆ ಒಟ್ಟು 359 ಅರ್ಜಿಗಳು ಸಲ್ಲಿಕೆಯಾಗಿದ್ದು, 285 ಅಂಗೀಕೃತಗೊಂಡು, 74 ಅರ್ಜಿಗಳು ತಿರಸ್ಕೃತವಾಗಿವೆ.
ಒಟ್ಟಾರೆ ವಿವಿಧ ಅಭಿವೃದ್ಧಿ ನಿಗಮಗಳಡಿ ಚೈತನ್ಯ ಸ್ವಯಂ ಉದ್ಯೋಗ ಯೋಜನೆಗೆ ಒಟ್ಟು 1177 ಅರ್ಜಿಗಳು ಸಲ್ಲಿಕೆಯಾಗಿದ್ದು, 795 ಅಂಗೀಕೃತಗೊಂಡು, 382 ಅರ್ಜಿಗಳು ತಿರಸ್ಕೃತವಾಗಿವೆ. ಸಾಂಪ್ರದಾಯಿಕ ಕುಶಲಕರ್ಮಿ ಸಾಲ ಯೋಜನೆಗೆ ಒಟ್ಟು 327 ಅರ್ಜಿಗಳು ಸಲ್ಲಿಕೆಯಾಗಿದ್ದು, 260 ಅಂಗೀಕೃತಗೊಂಡು, 67 ತಿರಸ್ಕೃತವಾಗಿವೆ. ಕಿರುಸಾಲ ಯೋಜನೆಗೆ ಒಟ್ಟು 83 ಅರ್ಜಿಗಳು ಸಲ್ಲಿಕೆಯಾಗಿದ್ದು, 45 ಅಂಗೀಕೃತಗೊಂಡು, 38 ಅರ್ಜಿಗಳು ತಿರಸ್ಕೃತವಾಗಿವೆ. ಗಂಗಾ ಕಲ್ಯಾಣ ಯೋಜನೆಗೆ ಒಟ್ಟು 58 ಅರ್ಜಿಗಳು ಸಲ್ಲಿಕೆಯಾಗಿದ್ದು, 28 ಅರ್ಜಿಗಳು ಅಂಗೀಕೃತಗೊಂಡಿದ್ದು, 30 ಅರ್ಜಿಗಳು ತಿರಸ್ಕೃತವಾಗಿವೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ.) ಕುರುಬರ ಹಾಸ್ಟೆಲ್ ಕಟ್ಟಡ, ಹದಡಿ ರಸ್ತೆ, ಜಯದೇವ ಸರ್ಕಲ್ ಹತ್ತಿರ ದಾವಣಗೆರೆ 577002 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.