ದಾವಣಗೆರೆ: ಜಿಲ್ಲೆಯಲ್ಲಿ ಅವಧಿ ಮೀರಿದ 9.90 ಲಕ್ಷ ರೂ. ಮೌಲ್ಯದ ಮದ್ಯ ನಾಶ ಮಾಡಲಾಗಿದೆ. ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲೆ ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಮದ್ಯ ನಾಶ ಮಾಡಲಾಗಿದೆ.
ಕೆಎಸ್ ಬಿಸಿಎಲ್ ಲಿಕ್ಕರ್ ಡಿಪೊದಲ್ಲಿ ಮಾರಾಟ ಆಗದೇ ಮದ್ಯ ಉಳಿದಿತ್ತು. 7.33 ಲಕ್ಷ ಮೌಲ್ಯದ 576.87 ಲೀಟರ್ ವಿವಿಧ ಮಾದರಿಯ ಮದ್ಯ ಹಾಗೂ 2.57 ಲಕ್ಷ ರೂಪಾಯಿ ಮೌಲ್ಯದ ಬಿಯರ್ ನಾಶ ಮಾಡಲಾಗಿದೆ. ಅಬಕಾರಿ ಉಪ ಆಯುಕ್ತ ಬಿ ಶಿವಪ್ರಸಾದ ಹಾಗೂ ಅಬಕಾರಿ ಉಪ ಅಧೀಕ್ಷಕ ಕೆಎಲ್ ನಾಗರಾಜ್ ಸಮ್ಮುಖದಲ್ಲಿ ಮದ್ಯ ನಾಶ ಮಾಡಲಾಗಿದೆ.



