ದಾವಣಗೆರೆ: ತಾಲೂಕಿನ ಅಗಸನಕಟ್ಟೆ ಗ್ರಾಮದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ (ICAR–tkvk) ಮೆಕ್ಕೆಜೋಳದಲ್ಲಿ ತೊಗರಿಯನ್ನು ಅಂತರ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಪ್ರಾತ್ಯಕ್ಷಿಕೆಯ ಅಂಗವಾಗಿ ತೊಗರಿ ಬೆಳೆಯ ಕ್ಷೇತ್ರೋತ್ಸವನ್ನು ಆಚರಿಸಲಾಯಿತು.
ತೊಗರಿಯನ್ನು ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ಬೆಳೆದರೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಆದಾಯವನ್ನು ದ್ವಿಗುಣ ಗೊಳಿಸಬಹುದು ಎಂದು ಕೇಂದ್ರದ ಬೇಸಾಯ ತಜ್ಞರಾದ ಶ್ರೀ ಮಲ್ಲಿಕಾರ್ಜುನ ಬಿ ಓ ರವರು ಅಭಿಪ್ರಾಯಪಟ್ಟರು. ಮಣ್ಣು ವಿಜ್ಞಾನಿ ಎಚ್ಎಎಂ ಸಣ್ಣ ಗೌಡರ್, ತೊಗರಿಯಲ್ಲಿ ಕಾಡುವ ಕಾಯಿಕೊರಕದ ಕೀಟ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದರು. ಕಾರ್ಯಕ್ರಮದಲ್ಲಿ ಅಗಸನಕಟ್ಟೆ ಪ್ರಗತಿಪರ ರೈತರಾದ ಶಿವಕುಮಾರ್ ಸಿದ್ದೇಶ್ ವಸಂತ್ ಕುಮಾರ್ ಹಾಗೂ ಶ್ರೀ ಚನ್ನಪ್ಪನವರು ಭಾಗವಹಿಸಿದ್ದರು.



